ನವದೆಹಲಿ, ಮೇ 04 (Daijiworld News/MSP): ಇಂದು ನಡೆಯಲಿರುವ ನ್ಯಾಮ್ ವರ್ಚುವಲ್ ಶೃಂಗಸಭೆಯಲ್ಲಿ ಮೊತ್ತ ಮೊದಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು ಮೊದಲ ಬಾರಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಮಾರ್ಗಗಳ ಬಗ್ಗೆ ಚರ್ಚಿಸಲಿದ್ದಾರೆ.
ಭಾರತೀಯ ಸಮಯ ಸಂಜೆ 4.30 ಕ್ಕೆ ಈ ಸಭೆ ನಡೆಯಲಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಕೂಡ ಭಾಗವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
2014 ರ ಬಳಿಕ ಪ್ರಧಾನ ಮಂತ್ರಿಯಾದ ನಂತರ ಪ್ರಧಾನಿ ಮೋದಿಯವರು ನಾಮ್ ಸಭೆಯಲ್ಲಿ ಭಾಗವಹಿಸುವುದು ಇದೇ ಮೊದಲು. 2016 ಮತ್ತು 2019 ರಲ್ಲಿ ನಡೆದ ನ್ಯಾಮ್ ಶೃಂಗಸಭೆಯನ್ನು ಕೊನೆಯ ಎರಡು ಶೃಂಗಸಭೆಗಳಲ್ಲಿ ಭಾರತವನ್ನು ಉಪ ರಾಷ್ಟ್ರಪತಿಗಳು ಪ್ರತಿನಿಧಿಸಿದ್ದರು.
ನ್ಯಾಮ್ ವಿಶ್ವಸಂಸ್ಥೆಯಿಂದ ಹೊರಗಿರುವ ಅತಿದೊಡ್ಡ ದೇಶಗಳ ಗುಂಪನ್ನು ಪ್ರತಿನಿಧಿಸುತ್ತದೆ ಮತ್ತು ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ಖಂಡದ 120 ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಮೂಹವನ್ನು ಒಳಗೊಂಡಿದೆ.