ನವದೆಹಲಿ, ಮೇ 04 (DaijiworldNews/PY) : ದೇಶದ ವಿವಿಧ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ಊಟ, ವಸತಿ ಇಲ್ಲದೆ ನರಳುತ್ತಿರುವ ವಲಸೆ ಕಾರ್ಮಿಕರಿಂದ ರೈಲು ಪ್ರಯಾಣವನ್ನು ವಸೂಲಿ ಮಾಡುತ್ತಿರುವ ರೈಲ್ವೆ ಸಚಿವಾಲಯ, ಪಿಎಂ- ಕೇರ್ಸ್ ಫಂಡ್ ಗೆ 151 ಕೋಟಿ ನೆರವು ನೀಡಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಒಂದು ಕಡೆ ವಲಸೆ ಕಾರ್ಮಿಕರಿಂದ ಭಾರತೀಯ ರೈಲ್ವೆ ರೈಲು ಪ್ರಯಾಣ ವೆಚ್ಚವನ್ನು ವಸೂಲಿ ಮಾಡುತ್ತಿದೆ. ಇನ್ನೊಂದು ಕಡೆ ಪ್ರಧಾನ ಮಂತ್ರಿ ಕೇರ್ಸ್ ಫಂಡ್ಗೆ ಹಣವನ್ನು ನೀಡುತ್ತಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿ ಊಟ, ವಸತಿ ಇಲ್ಲದೇ ನರಳುತ್ತಿರುವ ವಲಸೆ ಕಾರ್ಮಿಕರಿಂದ ರೈಲ್ವೆ ಸಚಿವಾಲಯವು ರೈಲು ಪ್ರಯಾಣ ವೆಚ್ಚವನ್ನು ವಸೂಲಿ ಮಾಡುತ್ತಿದ್ದು, 151 ಕೋಟಿ ನೆರವನ್ನು ಪ್ರಧಾನ ಮಂತ್ರಿ ಕೇರ್ಸ್ ಫಂಡ್ಗೆ ನೀಡಿದೆ. ಈ ಸಮಸ್ಯೆಯನ್ನು ಪರಿಹಾರ ಮಾಡಬೇಕು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.