ಭೋಪಾಲ್, ಮೇ 04 (DaijiworldNews/PY) : ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಎಂದು ತೋರಿಸುವ ನಿಟ್ಟಿನಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ಉದ್ದೇಶಪೂರ್ವಕವಾಗಿಯೇ ಕೊರೊನಾ ಪರೀಕ್ಷೆಗೆ ಕಡಿಮೆ ಜನರನ್ನು ಒಳಪಡಿಸುತ್ತಿದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಹೇಳಿದ್ದಾರೆ.
ಭೋಪಾಲ್, ಇಂದೋರ್, ಜಬಲ್ಪುರ ಹಾಗೂ ಇತರೆ ಪ್ರಮುಖ ನಗರಗಳಲ್ಲಿ ಮಾತ್ರವೇ ಕೊರೊನಾ ಸೋಂಕು ತಪಾಸಣೆ ಹೆಸರಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ರಾಜ್ಯದ ಗ್ರಾಮೀಣ ಜನಸಂಖ್ಯೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ನಾನೇನಾದರೂ ಅಧಿಕಾರದಲ್ಲಿದ್ದರೆ ಕೊರೊನಾ ಸೋಂಕನ್ನು ಪರೀಕ್ಷಿಸಲು ರಾಜ್ಯದ ಪ್ರತೀ ಜಿಲ್ಲೆಗೆ ಪರೀಕ್ಷಾ ಕಿಟ್ ನೀಡುತ್ತಿದ್ದೆ ಎಂದರು.