ಬೆಂಗಳೂರು, ಮೇ 05 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಕಳೆದ 40 ದಿನದಿಂದ ಮುಚ್ಚಿದ್ದ ಮದ್ಯದಂಗಡಿಯನ್ನು ಸೋಮವಾರ ತೆರೆಯಲಾಗಿದ್ದು ಮೊದಲ ದಿನವೇ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.
ಸೋಮವಾರ 25 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಮೀರಿ 45 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಅದರಲ್ಲೂ ಶೇ. 40ರಷ್ಟು ಮದ್ಯ ಮಾರಾಟ ಬೆಂಗಳೂರಿನಲ್ಲಿಯೇ ಮಾರಾಟವಾಗಿದೆ ಎಂದು ಅಬಕಾರಿ ಸಚಿವ ಎಚ್ ನಾಗೇಶ್ ಅವರು ಮಾದ್ಯಮವೊಂದಕ್ಕೆ ತಿಳಿಸಿದ್ದಾರೆ.
ಹಲವು ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆಯೇ ಜನರು ಮದ್ಯದಂಗಡಿ ಮುಂದೆ ನಿಂತಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗೆಯೇ ಎಂಆರ್ಪಿ ದರಕ್ಕಿಂತ ಅಧಿಕ ಬೆಲೆಗೆ ಮಾರಾಟ ಮಾಡುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮದ್ಯ ಮುಂದಿನ ಹತ್ತು ದಿನಕ್ಕೆ ಬೇಕಾಗುವಷ್ಟು ಸ್ಟಾಕ್ ಇದೆ. ಇನ್ನು 26.5 ಲಕ್ಷ ಐಎಂಎಲ್ ಬಾಕ್ಸ್ ಗಳು ಮತ್ತು 16.5 ಲಕ್ಷ ಬಿಯರ್ ಬಾಕ್ಸ್ ಸ್ಟಾಕ್ ಇದೆ. ಜನರು ಮದ್ಯ ಖರೀದಿ ಮಾಡಲು ಅಂಗಡಿ ಮುಂದೆ ಮುಗಿ ಬೀಳಬೇಡಿ ಎಂದು ತಿಳಿಸಿದ್ದಾರೆ.