ನವದೆಹಲಿ, ಮೇ 05 (Daijiworld News/MB) : ಕೊರೊನಾ ಲಾಕ್ಡೌನ್ ಆದ ೪೦ ದಿನಗಳ ಬಳಿಕ ಮದ್ಯದಂಗಡಿ ತೆರೆದಿದ್ದು ಜನರು ಮುಗಿಬಿದ್ದು ಮದ್ಯ ಖರೀದಿ ಮಾಡಿದ್ದಾರೆ. ಇದರಿಂದಾಗಿ ದೆಹಲಿ ಸರ್ಕಾರವು ಎಚ್ಚೆತ್ತಿದ್ದು ಮದ್ಯದ ಮೇಲೆ ಶೇ 70ರಷ್ಟು ಸುಂಕ ವಿಧಿಸಿದೆ.
ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಮೂರನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು ಮದ್ಯ ಮಾರಾಟ ಸೇರಿದಂತೆ ಕೆಲವು ಸಡಿಲಿಕೆ ಮಾಡಲಾಗಿದೆ. ಇದರಿಂದಾಗಿ ಮದ್ಯಪ್ರಿಯರು ಸೋಮವಾರ ರಾತ್ರಿಯಿಂದಲ್ಲೇ ಮದ್ಯದಂಗಡಿ ಮುಂದೆ ಸಾಲು ನಿಂತಿದ್ದರು.
ಈ ನಿಟ್ಟಿನಲ್ಲಿ ದೆಹಲಿ ಸರ್ಕಾರ ಮದ್ಯದ ಮೇಲೆ 'ವಿಶೇಷ ಕೊರೊನಾ ಶುಲ್ಕ' ವಿಧಿಸಿದ್ದು, ಇದು ಮಂಗಳವಾರದಿಂದಲ್ಲೇ ಜಾರಿಗೆ ಬರಲಿದೆ. ಮದ್ಯದ ಗರಿಷ್ಠ ಮಾರಾಟದ ಬೆಲೆಯ ಮೇಲೆ ಶೇ 70ರಷ್ಟು ವಿಶೇಷ ಸುಂಕ ವಿಧಿಸಲಾಗಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ಆರ್ಥಿಕವಾಗಿ ಸಂಕಷ್ಟ ಉಂಟಾಗಿದ್ದು ಮದ್ಯದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿರುವುದರಿಂದ ಸರ್ಕಾರಕ್ಕೆ ಆದಾಯ ಹೆಚ್ಚಳವಾಗಲಿದೆ.