ನವದೆಹಲಿ, ಮೇ 05 (Daijiworld News/MB) : ಬೆಲೆ ಶೇ.70 ರಷ್ಟು ಹೆಚ್ಚಿಸಿದ್ರೂ ಸರಿ ನಾವು ಮದ್ಯ ಖರೀದಿ ಮಾಡುತ್ತೇವೆ, ಇದು ದೇಶಕ್ಕೆ ನಮ್ಮ ಕೊಡುಗೆ ನಾವು ಭಾವಿಸುತ್ತೇವೆ ಎಂದು ದೆಹಲಿಯಲ್ಲಿ ಮದ್ಯಪ್ರಿಯರೊಬ್ಬರು ಹೇಳಿದ್ದಾರೆ.
ದೆಹಲಿ ಸರ್ಕಾರವು ಮದ್ಯದ ಮೇಲೆ ಶೇ. 70ರಷ್ಟು ಕೊರೊನಾ ವೈರಸ್ ಶುಲ್ಕ ವಿಧಿಸಿದ್ದರೂ ಮದ್ಯದ ಅಂಗಡಿ ಮುಂದೆ ಮಾತ್ರ ಮದ್ಯಪ್ರಿಯರು ನಿಂತಿರುವ ಸಾಲು ಕಡಿಮೆಯಾಗಿಲ್ಲ. ಬೆಳಗ್ಗೆ 9 ಗಂಟೆಗೆ ಮದ್ಯದಂಗಡಿ ತೆರೆಯುವುದಾದರೂ ಬೆಳಗ್ಗೆ 6 ಗಂಟೆಯಾಗುವಷ್ಟರಲ್ಲೇ ಜನರು ಬಂದಿದ್ದಾರೆ.
ಇನ್ನು ಮತ್ತೋರ್ವ ಮದ್ಯಪ್ರಿಯ ವ್ಯಕ್ತಿ, ದೇಶದ ಆರ್ಥಿಕತೆಗೆ ನಾವು ಮುಖ್ಯ. ಸರ್ಕಾರದ ಬಳಿ ಹಣವಿಲ್ಲ. ಮದ್ಯಪ್ರಿಯರೇ ಈ ದೇಶದ ಅರ್ಥ ವ್ಯವಸ್ಥೆ ಎಂದು ಹೇಳಿ ಸಾಲುಗಟ್ಟಿ ನಿಂತಿದ್ದವರ ಮೇಲೆ ಹೂ ಚೆಲ್ಲಿದ್ದಾರೆ.
ಈ ಕುರಿತು ಮಾತನಾಡಿದ ದೆಹಲಿಯ ಲಕ್ಷ್ಮಿ ನಗರದ ಅಂಗಡಿ ಎದುರಿನ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ, ಮದ್ಯದ ಬೆಲೆಯನ್ನು ಶೇ. 70ರಷ್ಟು ಹೆಚ್ಚಳ ಮಾಡಿದ್ರೂ ನಾವು ಖರೀದಿ ಮಾಡುತ್ತೇವೆ. ನಾವು ಅದು ದೇಶಕ್ಕೆ ನೀಡಿದ ಕೊಡುಗೆ ಎಂದು ಭಾವಿಸುತ್ತೇವೆ. ಆದರೆ ಇಲ್ಲಿ ಯಾವ ಭದ್ರತೆಯೂ ಸರಿ ಇಲ್ಲ. ಬೆಳಗ್ಗೆ 9 ಗಂಟೆಗೆ ಮದ್ಯದಂಗಡಿ ತಡೆರೆಯುತ್ತದೆ ಆದರೆ ಜನರು ಬೆಳಗ್ಗೆ 6 ಗಂಟೆಗೆ ಸಾಲು ನಿಂತಿದ್ದಾರೆ. ಆದರೆ ಪೊಲೀಸರು ಬಂದದ್ದು 8.55ಕ್ಕೆ. ಇಲ್ಲಿ ಏನಾದ್ರೂ ಆದ್ರೆ ಯಾರು ಹೊಣೆಯಾಗ್ತಾರೆ ಎಂದು ಪ್ರಶ್ನಿಸಿದ್ದಾರೆ.