ಬೆಂಗಳೂರು, ಮೇ 05 (DaijiworldNews/PY) : ಕಾಂಗ್ರೆಸ್ನವರು ಕಾರ್ಮಿಕರಿಗೆ ಬಸ್ ಹಾಗೂ ಟ್ರೈನ್ ಚಾರ್ಜ್ ನೀಡುತ್ತೇವೆ ಎಂದು ರೋಡ್ ರೋಡ್ನಲ್ಲಿ ರೋಡ್ನಲ್ಲಿ ಓಡಾಟ ಹಾಗೂ ಅದರ ಜಾಹೀರಾತುಗಳನ್ನು ಕೊಟ್ಟಿರುವುದನ್ನು ನೋಡಿದರೆ ಇದು ಕಾಂಗ್ರೆಸ್ನವರ ಭರ್ಜರಿ ಬಯಲಾಟ ಎಂದು ಗೊತ್ತಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕಾಂಗ್ರೆಸ್ ಮೆಜೆಸ್ಟಿಕ್ಗೆ ಭೇಟಿ ನೀಡಿ ಕೆಎಸ್ಆರ್ಟಿಸಿಗೆ ₹1 ಕೋಟಿ ಚೆಕ್ ನೀಡಲು ಪ್ರಯತ್ನಿಸಿತ್ತು. ಕಾರ್ಯಕರ್ತರಿಗೆ ಮೇ 4ರಂದು ವಿಡಿಯೋ ಸಂದೇಶ ಕಳುಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಲಸೆ ಕಾರ್ಮಿಕರನ್ನು ಸ್ವಾಗತಿಸಿದ್ದು, ಸ್ವಗ್ರಾಮಗಳಿಗೆ ತಲುಪಿಸುವುದಕ್ಕೆ ನೆರವಾಗಿ ಎಂದು ಸೂಚನೆ ನೀಡಿದ್ದರು.
ಕಾಂಗ್ರೆಸ್ ನಾಯಕೆ ಹೇಳಿಕೆಗೆ ಹಾಗೂ ಪ್ರಯತ್ನಕ್ಕೆ ಇಂದು ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಕಾಂಗ್ರೆಸ್ನವರ ಭರ್ಜರಿ ಬಯಲಾಟ ಇದು ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ನವರು ಕಾರ್ಮಿಕರಿಗೆ ಬಸ್ ಹಾಗೂ ಟ್ರೈನ್ ಚಾರ್ಜ್ ನೀಡುತ್ತೇವೆ ಎಂದು ರೋಡ್ ರೋಡ್ನಲ್ಲಿ ರೋಡ್ನಲ್ಲಿ ಓಡಾಟ ಹಾಗೂ ಅದರ ಜಾಹೀರಾತುಗಳನ್ನು ಕೊಟ್ಟಿರುವುದನ್ನು ನೋಡಿದರೆ ಇದು ಕಾಂಗ್ರೆಸ್ನವರ ಭರ್ಜರಿ ಬಯಲಾಟ. ನಿಯಮದ ಪ್ರಕಾರ ಹಣ ಯಾರಿಗೇ ಕೊಡಬೇಕಿತ್ತೋ ಅವರಿಗೆ ಕೊಡುವುದು ಬಿಟ್ಟು ಊರೆಲ್ಲಾ ಕ್ಯಾಮೆರಾದ ಎದುರು ಕಾಂಗ್ರೆಸ್ನವರು ಕಾರ್ಮಿಕರಿಗೆ ಬಸ್ ಹಾಗೂ ಟ್ರೈನ್ ಚಾರ್ಜ್ ನೀಡುತ್ತೇವೆ ಎಂದು ರೋಡ್ ರೋಡ್ನಲ್ಲಿ ರೋಡ್ನಲ್ಲಿ ಓಡಾಟ ಹಾಗೂ ಅದರ ಜಾಹೀರಾತುಗಳನ್ನು ಕೊಟ್ಟಿರುವುದನ್ನು ನೋಡಿದರೆ ಇದು ಕಾಂಗ್ರೆಸ್ನವರ ಭರ್ಜರಿ ಬಯಲಾಟ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.\