ಮುಳಬಾಗಿಲು, ಮೇ 6 (Daijiworld News/MSP): ಲಾಕ್ ಡೌನ್ ನಿಂದ ಮದ್ಯವಿಲ್ಲದೇ ಕಂಗೆಟ್ಟಿದ್ದ ಸೆಂಟ್ರಿಂಗ್ ಕೆಲಸ ಮಾಡುವ ಕಾರ್ಮಿಕನೊಬ್ಬ ಮದ್ಯ ನಿರ್ಬಂಧ ಮುಕ್ತವಾಗುತ್ತಿದ್ದಂತೆ ಮಂಗಳವಾರ ಕುಡಿದ ನಶೆಯಲ್ಲಿ ಜೀವಂತ ಹಾವನ್ನು ಕಚ್ಚಿ ಸಾಯಿಸಿ ವಿಕೃತಿ ಮೆರೆದ ಘತನೆ ಮುಳಬಾಗಿಲಿನ ಮುಷ್ಟೂರು ಗ್ರಾಮದಲ್ಲಿ ನಡೆದಿದೆ.
ಮುಷ್ಟೂರು ನಿವಾಸಿ ಕುಮಾರ್ ಮದ್ಯದ ಅಮಲಿನಲ್ಲಿ ಹಾವನ್ನು ಭೀಕರವಾಗಿ ಕಚ್ಚಿ ಸಾಯಿಸಿದಾತ.ಈತ ಸೋಮವಾರ ನಂಗಲಿ ಗ್ರಾಮದ ಬಾರ್ ಒಂದರಲ್ಲಿ ಮದ್ಯವನ್ನು ಖರೀದಿಸಿ ಸೇವಿಸಿದ್ದನು.
ಉಳಿದ ಮದ್ಯವನ್ನು ಮಂಗಳವಾರ ತೋಟಕ್ಕೆ ಹೋಗಿ ಕುಡಿಯುತ್ತಿದ್ದಾಗ ಕಂಡ ಜೀವಂತ ಹಾವನ್ನು ಕುತ್ತಿಗೆಗೆ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಾಗ ಊರಿವರು ಹೌಹಾರಿ ಹಾವನ್ನು ತೆಗೆಯುವಂತೆ ಹೇಳಿದ್ದಾರೆ. ಆದರೆ ಇದಕ್ಕೊಪ್ಪದ ಕುಮಾರ್ ಬೈಕ್ ನಲ್ಲಿಯೇ ಕುಳಿತು ಮದ್ಯ ಸೇವಿಸುತ್ತಾ ಹಾವನ್ನು ಕಚ್ಚಿ ಕಚ್ಚಿ ಸಾಯಿಸಿದ್ದಾನೆ . ಸದ್ಯಕ್ಕೆ ಆತನಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.