ನವದೆಹಲಿ, ಮೇ 06 (Daijiworld News/MB) : ದೇಶದಲ್ಲಿ ಕೊರೊನಾ ಲಾಕ್ಡೌನ್ನಿಂದಾಗಿ ಸಿಲುಕಿರುವ ವಲಸೆ ಕಾರ್ಮಿಕರ ಬಗ್ಗೆ ನಮ್ಮಲ್ಲಿ ಅಂಕಿಅಂಶ ಇಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.
ಲಾಕ್ಡೌನ್ನಿಂದಾಗಿ ದೇಶದಲ್ಲಿ ಎಲ್ಲೆಲ್ಲಿ ಎಷ್ಟು ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಮೂರು ದಿನದಲ್ಲಿ ಅಂಕಿ ಅಂಶ ಸಂಗ್ರಹಿಸಿ ಕೊಡಿ ಎಂದು ಕಾರ್ಮಿಕ ಸಚಿವಾಲಯ ತನ್ನ ಸ್ಥಳೀಯ ಕಚೇರಿಗಳಿಗೆ ಆದೇಶ ಹೊರಡಿಸಿದ ನಂತರ ಕಾಮನ್ ವೆಲ್ತ್ ಹ್ಯೂಮನ್ ರೈಟ್ಸ್ ಸಂಸ್ಥೆ ಅಂಕಿ ಅಂಶ ಕೇಳಿದೆ. ವೆಂಕಟೇಶ್ ನಾಯಕ್ ಎಂಬುವವರು ದೇಶದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಎಷ್ಟಿದೆ ಎಂದು ಮಾಹಿತಿ ಹಕ್ಕುಕಾಯ್ದೆಯಡಿ ಕೇಳಲಾಗಿದ್ದ ಪ್ರಶ್ನೆಗೆ ಕಾರ್ಮಿಕ ಇಲಾಖೆ ಮುಖ್ಯ ಆಯುಕ್ತ ಕಚೇರಿ ನಮ್ಮ ಬಳಿ ಅಂಕಿ ಅಂಶವಿಲ್ಲ ಎಂದು ತಿಳಿಸಿದೆ.
ವೆಂಕಟೇಶ್ ನಾಯಕ್ ಅವರು ಕಾರ್ಮಿಕ ಸಚಿವಾಲಯದ ಅಧಿಕೃತ ಘೋಷಣೆ ಮಾಡುವುದೆಂದು ಸುಮಾರು 2 ವಾರಗಳ ತನಕ ಕಾದಿದ್ದು ಆ ಬಳಿಕ ಆರ್ಟಿಐ ಅಡಿ ಮಾಹಿತಿ ಕೇಳಿದ್ದಾರೆ.
ದೇಶದಲ್ಲಿ ಲಾಕ್ಡೌನ್ನಿಂದಾಗಿ ಕಾರ್ಮಿಕರಿಗೆ ತುಂಬಾ ತೊಂದರೆ ಉಂಟಾಗಿದೆ. ಹಲವರು ನಿರಾಶ್ರಿತ ತಾಣಗಳಲ್ಲಿ, ಮನೆ ಮಾಲೀಕರ ಕೆಲಸ ಸ್ಥಳದಲ್ಲಿ, ಕೆಲವು ಕ್ಲಸ್ಟರ್ ಗಳಲ್ಲಿ ಇದ್ದಾರೆ. ಆದರೆ ಎಷ್ಟು ಜನರು ಇದ್ದಾರೆ ಎಂದು ತಿಳಿದು ಬಂದಿಲ್ಲ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.