ನವದೆಹಲಿ, ಮೇ 6 (Daijiworld News/MSP): ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹೇರಿರುವ ಲಾಕ್ ಡೌನ್ ಎಷ್ಟು ದಿನಗಳ ಕಾಲ ಮುಂದುವರಿಯುತ್ತದೆ? ಲಾಕ್ ಡೌನ್ ನಿರ್ಣಯಕ್ಕೆ ಬಳಸುತ್ತಿರುವ ಮಾನದಂಡಗಳು ಯಾವುದು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರವನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ನಾಯಕರ ಸಭೆಯಲ್ಲಿ ಅವರು ಮಾತನಾಡಿದ ಅವರು ಲಾಕ್ ಡೌನ್ ಮುಕ್ತಾಯದ ದಿನಾಂಕ ಮೇ 17 ರ ನಂತರ, ಏನು? ಮತ್ತು ಹೇಗೆ? ಇನ್ನು ಎಷ್ಟು ಸಮಯದವರೆಗೆ ಲಾಕ್ ಡೌನ್ ವಿಸ್ತರಿಸಲಾಗುತ್ತದೆ. ಇದೆಲ್ಲಾವನ್ನು ನಿರ್ಣಯಿಸಲು ಸರ್ಕಾರ ಯಾವ ಮಾನದಂಡಗಳನ್ನು ಬಳಸುತ್ತಿದೆ ಎಂದು ಪ್ರಶ್ನಿಸಿದರು.
ಇದೇ ವೇಳೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, 'ನಾವು ಹತ್ತು ಸಾವಿರ ಕೋಟಿ ರೂ. ಪ್ಯಾಕೇಜ್ ಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹಲವು ಬಾರಿ ಮನವಿ ಮಾಡಿದ್ದರೂ ಅದಕ್ಕೆ ಸ್ಪಂದಿಸಿಲ್ಲ ಎಂದು ದೂರಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, "ಸೋನಿಯಾ ಗಾಂಧಿಯವರು ಪ್ರಶ್ನಿಸಿರುವಂತೆ, ಲಾಕ್ಡೌನ್ 3.0 ಬಳಿಕ ಮುಂದೇನು ಎಂದು ನಾವು ತಿಳಿದುಕೊಳ್ಳಬೇಕು" ಎಂದು ಹೇಳಿದರು.