ವಿಶಾಖಪಟ್ಟಣಂ, ಮೇ 07 (Daijiworld News/MB) : ಎಲ್ಜಿ ಪಾಲಿಮರ್ಸ್ನಲ್ಲಿ ಅನಿಲ ಸೋರಿಕೆಯಾಗಿ ಒಂದು ಮಗು ಸೇರಿ 8 ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ವೆಂಕಟಾಪುರದಲ್ಲಿ ನಡೆದಿದೆ.
ಅನಿಲ ಸೋರಿಕೆಯಾದ ಪರಿಣಾಮ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಉಸಿರಾಟ ತೊಂದರೆ, ಕಣ್ಣು ಉರಿ ಆರಂಭವಾಗಿದ್ದು ನೂರಾರು ಮಂದಿ ಅಸ್ವಸ್ಥಗೊಂಡಿದ್ದಾರೆ.
ಸ್ಥಳಕ್ಕೆ ಈಗಾಗಲೇ ಪೊಲೀಸರು, ಅಗ್ನಿಶಾಮಕ ದಳ, ಆಂಬುಲೆನ್ಸ್ಗಳನ್ನು ಬಂದಿದ್ದು ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ.
ಈ ಕುರಿತು ಸುದ್ದಿ ಮಾಹಿತಿ ನೀಡಿದ ವಿಶಾಖಪಟ್ಟಣಂನ ಪೊಲೀಸ್ ಅಧಿಕಾರಿ ಸ್ವರೂಪ್ ರಾಣಿ ಅವರು, ಈ ಘಟನೆಯಿಂದ ಪ್ರಸ್ತುತ ಐವರು ಸಾವನ್ನಪ್ಪಿದ್ದು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಬಗ್ಗೆ ಬಳಿಕ ಮಾಹಿತಿ ನೀಡಲಾಗುವುದು. 70 ಮಂದಿ ಪ್ರಜ್ಞಾಹೀನರಾಗಿದ್ದು 200–500 ಮಂದಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.