ಭೋಪಾಲ್, ಮೇ 07 (Daijiworld News/MB) : ಕ್ವಾರಂಟೈನ್ ವಿಚಾರದಲ್ಲಿ ಜಗಳ ನಡೆದು ತಂದೆ ತನ್ನ ಮಗನನ್ನೇ ಹತ್ಯೆಗೈದ ದಾರುಣ ಘಟನೆ ಮಧ್ಯ ಪ್ರದೇಶದ ಬಲಘಾಟ್ ಜಿಲ್ಲೆಯ ಗರ್ಹಿಯ ಕುಗಾಂವ್ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ತೇಕಚಂದ್ ಪಂಚತಿಲಕ್ ಎಂದು ಗುರುತಿಸಲಾಗಿದೆ.
ಬುಡಕಟ್ಟು ವಲಸೆ ಕಾರ್ಮಿಕನಾಗಿದ್ದ ಈತ ಇತ್ತೀಚೆಗೆ ಹೈದರಾಬಾದ್ನಿಂದ ತನ್ನ ಊರಾದ ಗರ್ಹಿಯ ಕುಗಾಂವ್ ಗ್ರಾಮಕ್ಕೆ ಆಗಮಿಸಿದ್ದು ಬಲಘಾಟ್ ಜಿಲ್ಲೆಯ ಅಧಿಕಾರಿಗಳು ಒಂದು ದಿನದ ಮಟ್ಟಿಗೆ ಸಾಂಸ್ಥಕ ಕ್ವಾರಂಟೈನ್ಗೆ ಒಳಗಾಗುವಂತೆ ತಿಳಿಸಿದ್ದರು. ಆ ಬಳಿಕ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಿದ್ದರು.
ಈ ಸೂಚನೆಯಂತೆ ಆತ ಮನೆಗೆ ಬಂದ ಸಂದರ್ಭದಲ್ಲಿ ತಂದೆ ಭೀಮಲಾಲ್ ಮನೆಗೆ ಪ್ರವೇಶಿಸಲು ಬಿಡದೆ ಗ್ರಾಮ ಪಂಚಾಯ್ತಿ ವ್ಯವಸ್ಥೆ ಮಾಡಿರುವ ಸಂಸ್ಥೆಯಲ್ಲೇ ಕ್ವಾರಂಟೈನ್ನಲ್ಲಿ ಇರುವಂತೆ ಹೇಳಿದ್ದಾರೆ. ಇದಕ್ಕೆ ವಲಸೆ ಕಾರ್ಮಿಕ ಒಪ್ಪದೆ ಇಬ್ಬರ ನಡುವೆ ಜಗಳವಾಗಿದ್ದು ತಂದೆ ತಂದೆ ದೊಣ್ಣೆಯಿಂದ ಮಗನ ತಲೆಗೆ ಹೊಡೆದಿದ್ದು ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾನೆ.