ನವದೆಹಲಿ,ಮೇ 7 (Daijiworld News/MSP): ಕೋವಿಡ್ ಸೋಂಕಿತರ ಬಗ್ಗೆ ಅಲರ್ಟ್ ಮಾಡುವ ಮೊಬೈಲ್ ಅಪ್ಲಿಕೇಷನ್ ಆರೋಗ್ಯ ಸೇತು ವ್ಯಕ್ತಿಯ ವೈಯಕ್ತಿಕ ಮಾಹಿತಿಗಳ ಮೇಲೆ ನಿಗಾ ಇರಿಸುತ್ತದೆ ಎಂಬ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿರುವ ಕೇಂದ್ರ ಸರ್ಕಾರ, ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳಿದೆ.
ವಿಪಕ್ಷಗಳು ಮಾಹಿತಿ ಭದ್ರತೆಯ ಬಗೆಗಿನ ಆರೋಪ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಆ್ಯಪ್ ನಿಂದ ಯಾವುದೇ ಮಾಹಿತಿ ಸೋರಿಕೆ ಇಲ್ಲಆರೋಗ್ಯ ಆ್ಯಪ್ನ ಸುರಕ್ಷತೆಯ ಬಗ್ಗೆ ನಿರಂತರವಾಗಿ ಪರೀಕ್ಷೆ ನಡೆಸುಲಾಗುತ್ತಿದೆ. ಫ್ರಾನ್ಸ್ನ ಹ್ಯಾಕರ್ ಎತ್ತಿರುವ ಆಕ್ಷೇಪಗಳ ಬಗ್ಗೆ ಅವರ ಬಳಿಯೇ ಮಾತನಾಡಿ ಗೊಂದಲಗಳನ್ನು ಬಗೆಹರಿಸಿಕೊಳ್ಳಲಾಗಿದೆ. ಆ್ಯಪ್ ಬಳಕೆದಾರರ ಲೊಕೇಶನ್ ಆಧಾರಿತ ಮಾಹಿತಿಗಳು ಸರ್ವರ್ನಲ್ಲಿ ಸುಭದ್ರವಾಗಿರುತ್ತವೆ’ ಎಂದು ಸರ್ಕಾರ ಹೇಳಿದೆ.
ಈ ಹಿಂದೆ ವೈಟ್ ಹ್ಯಾಟ್ ಎಂಬ ಫ್ರಾನ್ಸ್ ಮೂಲದ ಹ್ಯಾಕರ್ ಗುಂಪೊಂದು ಭಾರತದ 90 ಮಿಲಿಯನ್ ಜನರ ವೈಯಕ್ತಿಕ ಮಾಹಿತಿಗಳು ಅಪಾಯದಲ್ಲಿವೆ ಎಂದು ಎಚ್ಚರಿಸಿತ್ತು.
ಕೊರೊನಾ ವೈರಸ್ ಪತ್ತೆ ಹಚ್ಚಬಲ್ಲ ತಂತ್ರಜ್ಞಾನ ಇರುವ ಈ ಆರೋಗ್ಯ ಸೇತು ಆ್ಯಪ್ ಕುರಿತು ಭಾರತೀಯರಿಗೆ ಭರವಸೆ ಇದೆ . ಇದು ಸಂಪೂರ್ಣ ಸುರಕ್ಷಿತವಾಗಿ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.