ನವದೆಹಲಿ, ಮೇ 7 (Daijiworld News/MSP): ತಬ್ಲಿಘಿ ಜಮಾತ್ ಗೆ ಸಂಬಂಧಿಸಿದ್ದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ವಹಿವಾಟಿಗೆ ನಿರ್ಬಂಧ ವಿಧಿಸಲಾಗಿದೆ. ತನಿಖಾ ಸಂಸ್ಥೆಗಳು ಈ ಬಗ್ಗೆ ಸೂಚನೆ ನೀಡಿದ್ದರಿಂದ ಬ್ಯಾಂಕ್ ಗಳು ಈ ಕ್ರಮವನ್ನು ಜಾರಿಗೊಳಿಸಿದ್ದು ತಮ್ಲಿಘಿ ಜಮಾತ್ ಗೆ ಸಂಬಂಧಪಟ್ಟ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
ಹೀಗಾಗಿ ಬ್ಯಾಂಕ್ ನ ಈ ಕ್ರಮದಿಂದ ಖಾತೆದಾರರಲ್ಲಿ ಯಾರೊಬ್ಬರೂ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ತಬ್ಲಿಘಿ ಜಮಾತ್ ನ ಮೌಲಾನ ಸಾದ್ ನ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಲು ಹಾಗೂ ಆತನನ್ನು ಬಂಧಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆಯಾದ ಬಳಿಕವೂ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ದೆಹಲಿಯಲ್ಲಿ ತಬ್ಲಿಘಿ ಜಮಾತ್ ನ ಧಾರ್ಮಿಕ ಸಭೆ ನಡೆಸಲಾಗಿತ್ತು. ಆ ಬಳಿಕ 40 ದಿನಗಳಿಂದ ರೂವಾರಿ ಮೌಲಾನಾ ಸಾದ್ ಕಾಣೆಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.