ನವದೆಹಲಿ, ಮೇ 07 (Daijiworld News/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲ್ಲೇ ಇದ್ದು ಗುರುವಾರ 50 ಸಾವಿರದ ಗಡಿ ದಾಟಿದ್ದು 52952 ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ಈವರೆಗೆ ಕೊರೊನಾ ಸೋಂಕಿಗೆ 1783 ಮಂದಿ ಬಲಿಯಾಗಿದ್ದು 15267 ಮಂದಿ ಗುಣಮುಖರಾಗಿದ್ದಾರೆ.
ಇನ್ನು ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಮಹಾರಾಷ್ಟ್ರದಲ್ಲಿ ಪೊಲೀಸ್ ಸಿಬ್ಬಂದಿಗಳು ಕೂಡಾ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದು ಈವರೆಗೆ ಐವರು ಪೊಲೀಸ್ ಸಿಬ್ಬಂದಿಗಳು ಕೊರೊನಾಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು 16758 ಮಂದಿಗೆ ಕೊರೊನಾ ಸೋಂಕು ತಗುಲಿದ್ದು 651 ಮೃತಪಟ್ಟರೆ 3094 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇನ್ನು ಕೊರೊನಾ ನಿಯಂತ್ರಣದಲ್ಲಿ ಕೇರಳದ ನಂತರ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 701 ಪ್ರಕರಣಗಳು ದಾಖಲಾಗಿದ್ದು 30 ಮಂದಿ ಸಾವನ್ನಪ್ಪಿದ್ದು 363 ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಪ್ರಥಮ ಸ್ಥಾನದಲ್ಲಿರುವ ಕೇರಳದಲ್ಲಿ 503 ಪ್ರಕರಣಗಳು ದಾಖಲಾಗಿದ್ದು 4 ಸೋಂಕಿತರು ಮೃತಪಟ್ಟರೆ 469 ಜನರು ಗುಣಮುಖರಾಗಿದ್ದಾರೆ.
ಗುಜರಾತ್ನಲ್ಲಿ 6625, ದೆಹಲಿಯಲ್ಲಿ 5532 ಪ್ರಕರಣಗಳು, ತಮಿಳುನಾಡಿನಲ್ಲಿ 4829 ಪ್ರಕರಣಗಳು, ರಾಜಸ್ಥಾನದಲ್ಲಿ 3317 ಪ್ರಕರಣಗಳು, ಮಧ್ಯಪ್ರದೇಶದಲ್ಲಿ 3138, ಆಂಧ್ರ ಪ್ರದೇಶದಲ್ಲಿ1777 ಪ್ರಕರಣ, ತೆಲಂಗಾಣದಲ್ಲಿ 1107 ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 2998, ಜಮ್ಮು ಕಾಶ್ಮೀರದಲ್ಲಿ 775 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 1456 ಪ್ರಕರಣಗಳು ದಾಖಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.