ವಿಶಾಖಪಟ್ಟಣಂ, ಮೇ 07 (Daijiworld News/MB) : ವಿಶಾಖಪಟ್ಟಣದಲ್ಲಿ ಗುರುವಾರ ನಡೆದ ಅನಿಲ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರವನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.
ಗುರುವಾರ ಮುಂಜಾನೆ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ಮುಂಜಾನೆ 3 ಗಂಟೆ ಹೊತ್ತಿನಲ್ಲಿ ವಿಷಾನಿಲ ಸೋರಿಕೆಯಾಗಿದ್ದು ಈವರೆಗೆ 11 ಮಂದಿ ಮೃತಪಟ್ಟಿದ್ದು, ಪ್ರಾಣಿ ಪಕ್ಷಿಗಳು ಕೂಡಾ ಸಾವನ್ನಪ್ಪಿದೆ. ಸುಮಾರು 5,000 ಮಂದಿ ಅಸ್ವಸ್ಥರಾಗಿದ್ದಾರೆ.
ಈ ಕುರಿತಾಗಿ ಮಾತನಾಡಿದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಲಾಗಿದ್ದು ಹಾಗೆಯೇ ಅಸ್ವಸ್ಥರ ಚಿಕಿತ್ಸೆಯನ್ನು ಕೂಡಾ ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.
ಹಲವಾರು ಮಂದಿ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಒದ್ದೆ ಬಟ್ಟೆಯನ್ನು ಮೂಗಿಗೆ ಅಡ್ಡಲಾಗಿ ಕಟ್ಟಿ ಮನೆಯೊಳಗೆಯೇ ಇರುವಂತೆ ಜನರಿಗೆ ಸೂಚಿಸಲಾಗಿದೆ.