ಉತ್ತರ ಪ್ರದೇಶ, ಮೇ 08 (DaijiworldNews/PY) : ಶಾಮ್ಲಿ ಜಿಲ್ಲೆಯಲ್ಲಿ ಕೊರೊನಾ ಹರಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಕರ್ನಾಟಕ ಹಾಗೂ ಅಸ್ಸಾಂ ರಾಜ್ಯಗಳಿಗೆ ಸೇರಿದ ತಬ್ಲೀಗಿ ಜಮಾತ್ನ 24 ಸದಸ್ಯರ ವಿರುದ್ದ ಬುಧವಾರ ಪ್ರಕರಣ ದಾಖಲಿಸಲಾಗಿದೆ.
ತಬ್ಲೀಗಿ ಜಮಾತ್ನ 24 ಜನರು ಕಳೆದ ಎ.23ರಿಂದ ಕೈರಾನಾ ಪಟ್ಟಣದಲ್ಲಿ ತಂಗಿದ್ದರು. ಪೊಲೀಸರಿಗೆ ಈ ವಿಚಾರವಾಗಿ ಮಾಹಿತಿ ನೀಡಿರಲಿಲ್ಲ. ಇವರ ವಿರುದ್ದ ಐಪಿಸಿ ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಯಶಪಾಲ್ ಧಾಮಾ ಹೇಳಿದ್ದಾರೆ.
ಜಿಲ್ಲೆಯ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶೇರ್ನಗರ ಗ್ರಾಮದ ಮಸೀದಿಯಲ್ಲಿ ಕೂಡಾ ತಬ್ಲೀಗ್ ಜಮಾತ್ನ 10 ಸದಸ್ಯರು ತಂಗಿದ್ದು, ಅವರ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ ಪೊಲೀಸರು ಹೇಳೀದ್ದಾರೆ.
ಈ ಪೈಕಿ ಒಬ್ಬನಲ್ಲಿ ಕೊರೊನಾ ಇರುವುದು ಖಚಿತವಾಗಿದ್ದು, ಗ್ರಾಮವನ್ನು ಹಾಟ್ಸ್ಪಾಟ್ ಎಂದು ಘೋಷಣೆ ಮಾಡಲಾಗಿದೆ.