ನವದೆಹಲಿ, ಮೇ 08 (Daijiworld News/MSP): ಲಾಕ್ ಡೌನ್ ಮುಗಿದ ನಂತರ ಶಾಲೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸುತ್ತಿದೆ. ಕೊರೊನಾದಿಂದ ಎಲ್ಲರ ಜೀವನ ಶೈಲಿಯನ್ನು ಬದಲಾಯಿಸಿಬೇಕಾಗುತ್ತದೆ. ಇದು ವಿದ್ಯಾರ್ಥಿಗಳ ಜೀವನವನ್ನು ವಿಭಿನ್ನವಾಗಿಸುತ್ತದೆ. ಗ್ರಂಥಾಲಯ, ಕ್ಯಾಂಟೀನ್, ವಿಭಿನ್ನವಾದ ಆಸನ ವ್ಯವಸ್ಥೆ ಜೊತೆಗೆ ಸಾಮಾಜಿಕವಾಗಿ ಅಂತರ ಜೀವನದ ಭಾಗವಾಗಬಹುದು ಎಂದು ಮಾನವ ಸಂಪನ್ಮೂಲ ಇಲಾಖೆ ಅಭಿಪ್ರಾಯಪಟ್ಟಿದೆ.
ಶಾಲಾ ಪುನರಾರಂಭಕ್ಕೆ ಬೇಕಾದ ಸಿದ್ದತೆ , ಹಾಗೂ ಅನುಸರಿಸಬೇಕಾದ ಸುರಕ್ಷತಾ ಮಾರ್ಗಸೂಚಿಗಳನ್ನು ಮಾನವ ಸಂಪನ್ಮೂಲ ಇಲಾಖೆ ಈಗಾಗಲೇ ಸಿದ್ದಪಡಿಸತೊಡಗಿದ್ದು, ಶಾಲೆಗಳಲ್ಲಿ ಸಮ -ಬೆಸ ಯೋಜನೆ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಶಾಲೆಗಳಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳಿರುವಂತೆ ಗೈಡ್ಲೈನ್ಸ್ ರೂಪಿಸಲಾಗುತ್ತಿದೆ.
ಇದಲ್ಲದೆ ಶಾಲೆಗಳಲ್ಲಿ ಬೆಳಗ್ಗೆ ನಡೆಸಲಾಗುವ ಅಸೆಂಬ್ಲಿ, ಕ್ರೀಡಾ ಚಟುವಟಿಕೆ ಸ್ಥಗಿತಗೊಳಿಸಬೇಕಾಗಬಹುದು. ಶಾಲಾ ಬಸ್ , ಶೌಚಾಲಯ , ಕ್ಯಾಂಟೀನ್ ಗಳಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂಬ ನಿಯಮಗಳನ್ನು ಜಾರಿಗೊಳಿಸಬೇಕಾಗುತ್ತದೆ. ಅಲ್ಲದೆ ಶಾಲಾ ಸಂಪೂರ್ಣ ಕಟ್ಟಡಕ್ಕೆನಿಯಮಿತವಾಗಿ ಸೋಂಕು ನಿವಾರಕಗಳ ಸಿಂಪಡಣೆ, ಶಾಲಾ ಸಮವಸ್ತ್ರದೊಂದಿಗೆ ಮಾಸ್ಕ್ ಕಡ್ಡಾಯ ಮುಂತಾದವು ಮಾರ್ಗಸೂಚಿಗಳ ಭಾಗವಾಗಿರಬಹುದು.
ಇದರೊಂದಿಗೆ 12 ವಾಹಿನಿಗಳನ್ನು ಪ್ರಾರಂಭ ಮಾಡಲು ಪ್ರಸ್ತಾಪಿಸಲಾಗಿದೆ.ವಿದ್ಯಾರ್ಥಿಗಳ ಕಲಿಕೆಗೆ ಅನುವಾಗುವಂತೆ 1 ನೇ ತರಗತಿಯಿಂದ ಪಿಯುಸಿ ವರೆಗೆ 12 ಪ್ರತ್ಯೇಕ ವಾಹಿನಿಗಳನ್ನು ಪ್ರಾರಂಭಿಸಲಾಗುವುದು.ಶಾಲೆಗಳಲ್ಲಿ ಸಮ -ಬೆಸ ಯೋಜನೆ ಜಾರಿಗೆ ತರುವುದರಿಂದ ಮಕ್ಕಳು ಅಂತರ ಕಾಯ್ದುಕೊಳ್ಳಲು, ಸುರಕ್ಷತೆ ಅನುಸರಿಸಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.