ಬೆಂಗಳೂರು, ಮೇ 08 (Daijiworld News/MSP):ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಇಂದು ರಾಜ್ಯದಲ್ಲಿ ಬರೋಬ್ಬರಿ 45 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕು ಪೀಡಿತರ ಸಂಖ್ಯೆ 750 ಕ್ಕೆ ಏರಿಕೆಯಾಗಿದೆ.
ಲಾಕ್ ಡೌನ್ ಸಡಿಲಿಕೆ ಬಳಿಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಗುರುವಾರ ಸಂಜೆ ವೇಳೆಗೆ 705 ಸೋಂಕಿತರಿದ್ದು, 12 ಗಂಟೆಯಲ್ಲಿ ಧೀಡಿರ್ ಆಗಿ 45 ಸೋಂಕು ಪತ್ತೆಯಾಗಿದೆ. ಒಂದೇ ದಿನ ಇಷ್ಟು ಏಕಾಏಕಿ ಸೋಂಕಿತರ ಸಂಖ್ಯೆ ಕಂಡುಬಂದಿರುವುದು ಇದೇ ಮೊದಲು ಎಂದು ಅಂದಾಜಿಸಲಾಗಿದೆ
ರಾಜ್ಯ ಕುಟುಂಬ ಕಲ್ಯಾಣ ಇಲಾಖೆ ಮಧ್ಯಾಹ್ನದ 12 ಗಂಟೆಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಭಟ್ಕಳದಲ್ಲಿ-12, ಬೆಳಗಾವಿ ಜಿಲ್ಲೆಯಲ್ಲಿ 11, ದಾವಣಗೆರೆ ಜಿಲ್ಲೆಯಲ್ಲಿ 14 ಬೆಂಗಳೂರಿನಲ್ಲಿ 7, ಬಳ್ಳಾರಿಯ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ…
ಭಟ್ಕಳದಲ್ಲಿ ಓರ್ವ ಸೋಂಕಿತನಿಂದಲೇ 12 ಮಂದಿಗೆ ವೈರಸ್ ತಗುಲಿದೆ. ಏಕಾಏಕಿ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಕುಮುಟ ಹೊನ್ನಾವರದ ಶಾಸಕ ದಿನಕರ ಶೆತ್ಟಿ , ಭಟ್ಕಳವನ್ನು ಸೀಲ್ ಡೌನ್ ಮಾಡುವಂತೆ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.