ಬೆಂಗಳೂರು, ಮೇ 08 (Daijiworld News/MSP): ಮದ್ಯದಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ ಇನ್ಮುಂದೆ ಕ್ಲಬ್ ಹಾಗೂ ಪಬ್ ಗಳಲ್ಲೂ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಈ ಕುರಿತಂತೆ ಅಬಕಾರಿ ಸಚಿವ ಎಚ್.ನಾಗೇಶ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ನಾಳೆಯಿಂದ ಎಲ್ಲ ಕ್ಲಬ್, ಪಬ್ ಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದಿದ್ದಾರೆ
ಕಳೆದ ಕೆಲ ದಿನಗಳ ಹಿಂದೆ ಷರತ್ತುಗಳ ಮೇರೆಗೆ ಮದ್ಯ ಮಾರಾಟಕ್ಕೆ ಮದ್ಯದಂಗಡಿಗಳಿಗೆ ಅನುಮತಿ ನೀಡಲಾಗಿತ್ತು. ಈ ವೇಳೆ, ಎಲ್ಲೆಡೆ ಬಾರ್ ಗಳ ಮುಂದೆ ಎಣ್ಣೆ ಪ್ರಿಯರ ಉದ್ದುದ್ದ ಸಾಲುಗಳೇ ಕಂಡುಬಂದಿದ್ದವು. ಇದರೊಂದಿಗೆ ಕ್ಲಬ್ ಹಾಗೂ ಪಬ್ ಗಳ ಮಾಲೀಕರ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮಗೂ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು ಹೀಗಾಗಿ ಕ್ಲಬ್ ಪಬ್ ಗಳಿಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ
ಆದರೆ, ಈ ಕ್ಲಬ್, ಪಬ್ ಸೇರಿದಂತೆ ಎಲ್ಲೆಡೆ ಮದ್ಯವನ್ನು ಎಂಆರ್ ಪಿ ದರದಲ್ಲಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದರೊಂದಿಗೆ ಪಾರ್ಸಲ್ ವ್ಯವಸ್ಥೆಗಷ್ಟೇ ಅನುಮತಿ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇತರೇ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ