ರಾಮನಗರ, ಮೇ 09 (DaijiworldNews/PY) : ಆಹಾರ ಹುಡುಕುತ್ತಾ ಬಂದ ಚಿರತೆಯೊಂದು ಮನೆಯಲ್ಲಿ ನಿದ್ರಿಸುತ್ತಿದ್ದ ಮಗುವನ್ನು ಹೊತ್ತೊಯ್ದು ಕೊಂದ ಘಟನೆ ಮಾಗಡಿ ತಾಲೂಕಿನ ಕಸಬಾ ಹೋಬಳಿ ಕದರಯ್ಯನ ಪಾಳ್ಯದಲ್ಲಿ ನಡೆದಿದೆ.
ಮೃತಪಟ್ಟ ಮಗುವನ್ನು ಹೇಮಂತ್ (3) ಎನ್ನಲಾಗಿದೆ.
ರಾತ್ರಿ ಸುಮಾರು 12.30ರ ವೇಳೆಗೆ ಬಂದ ಚಿರತೆಯೊಂದ ಮನೆ ಒಳಗೆ ಮಲಗಿದ್ದ ಮಗುವನ್ನು ಹೊತ್ತೊಯ್ದಿದೆ. ಮಗುವನ್ನು ಹೊತ್ತೊಯ್ದು ಎಳೆದಾಡಿರುವ ಕಾರಣ ಮಗುವಿನ ರುಂಡ, ಮುಂಡ ಬೇರ್ಪಟ್ಟದ್ದು, ಕೈಗಳು ತುಂಡಾಗಿವೆ. ಚಿರತೆ ಮಗುವನ್ನು ಹೊತ್ತೊಯ್ದ ಕೆಲವೇ ಹೊತ್ತಿನಲ್ಲಿ ಮಗುವಿನ ಪೋಷಕರು ಬೆನ್ನು ಹತ್ತಿದ್ದು, ಅಷ್ಟರಲ್ಲಾಗಲೇ ಮಗು ಚಿರತೆಗೆ ಬಲಿಯಾಗಿತ್ತು ಎನ್ನಲಾಗಿದೆ.
ಮನೆಯಲ್ಲಿ ಮಲಗಿ ನಿದ್ರಿಸುತ್ತಿದ್ದ ಮಗುವನ್ನು ಚಿರತೆ ಹೊತ್ತೊಯ್ದಿದೆ ಎಂಬುದರ ಬಗ್ಗೆ ಕೆಲವು ಗ್ರಾಮಸ್ಥರು ಇದು ಚಿರತೆಯಲ್ಲ ದೊಡ್ಡ ನಾಯಿಯಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.