ಬೆಂಗಳೂರು, ಮೇ 09 (DaijiworldNews/PY) : ಆಡಳಿತ ಮಂಡಳಿ ತಮಗೆ ಮಾಸ್ಕ್ ಹಾಗೂ ಪಿಪಿಐ ಕಿಟ್ಗಳಂತ ಕನಿಷ್ಠ ಸೌಲಭ್ಯಗಳನ್ನೂ ಒದಗಿಸಿಲ್ಲ ಎಂದು ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ.
ಆಸ್ಪತ್ರೆಗೆ ಪಾದರಾಯನಪುರ ಗರ್ಭಿಣಿಯೊಬ್ಬರು ದಾಖಲಾದಾಗಿನಿಂದ ಆತಂಕಕ್ಕೆ ಒಳಗಾದ ವೈದ್ಯಕೀಯ ಸಿಬ್ಬಂದಿ ತಮ್ಮ ಕೆಲಸದಿಂದ ದೂರ ಉಳಿದಿದ್ದು, ಆಡಳಿತ ಮಂಡಳಿಯ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ.
ಬೆಳಿಗ್ಗೆ ಆಸ್ಪತ್ರೆಯ ಆವರಣದಲ್ಲಿ ಸೇರಿರುವ ವೈದ್ಯರು ಹಾಗೂ ದಾದಿಯರು ತಮಗೆ ಆಡಳಿತ ಮಂಡಳಿಯು ಮಾಸ್ಕ್ ಹಾಗೂ ಪಿಪಿಐ ಕಿಟ್ಗಳೂ ಸೇರಿದಂತೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇ೦ತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಕಾರ್ಯ ನಿರ್ವಹಿಸುವುದು ಎಂದು ಕೇಳಿದ್ದಾರೆ.
ಆಸ್ಪತ್ರೆಯಲ್ಲಿ ಪಾದರಾಯನಪುರದ ಮಹಿಳೆ ಹಾಗೂ ಅವರ ಸಂಬಂಧಿಕರು ಓಡಾಡಿದ್ದು, ವೈದ್ಯಕೀಯ ಸಿಬ್ಬಂದಿಗೆ ಇದು ಆತಂಕಕ್ಕೆ ಕಾರಣವಾಗಿದೆ.