ನವದೆಹಲಿ, ಮೇ 09 (Daijiworld News/MSP): ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಪಶ್ಚಿಮಬಂಗಾಳದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ಆರೋಪಿಸಿದ್ದಾರೆ.
ಕೇಂದ್ರವು 200,000 ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಮನೆಗೆ ತಲುಪಲು ಅನುಕೂಲ ಮಾಡಿಕೊಟ್ಟಿದೆ. ಪಶ್ಚಿಮ ಬಂಗಾಳದ ಕಾರ್ಮಿಕರು ಸಹ ತಮ್ಮೂರಿಗೆ ಹಿಂತಿರುಗಲು ಉತ್ಸುಕರಾಗಿದ್ದಾರೆ ಆದರೆ ವಲಸೆ ಕಾರ್ಮಿಕರನ್ನು ಹೊತ್ತ ರೈಲು ಪಶ್ಚಿಮ ಬಂಗಾಳ ಪ್ರವೇಶಿದಂತೆ ತಡೆದು ಮಮತ ಬ್ಯಾನರ್ಜಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಪತ್ರದ ಮುಖೇನ ಅಸಮಧಾನ ವ್ಯಕ್ತಪಡಿಸದ ಶಾ "ಪಶ್ಚಿಮ ಬಂಗಾಳ ಸರ್ಕಾರವು ವಲಸಿಗರೊಂದಿಗೆ ರಾಜ್ಯವನ್ನು ತಲುಪಲು ರೈಲುಗಳಿಗೆ ಅವಕಾಶ ನೀಡುತ್ತಿಲ್ಲ. ಇದರಿಮ್ದ ವಲಸೆ ಕಾರ್ಮಿಕರಿಗೆ ಅನ್ಯಾಯವಾಗಿದೆ. ಪಶ್ಚಿಮ ಬಂಗಾಳ ಈ ರೀತಯ ಅಸಹಕಾರ ವಲಸೆ ಕಾರ್ಮಿಕರನ್ನು ಮತ್ತಷ್ಟು ಕಷ್ಟಗಳಿಗೆ ತಳ್ಳುವಂತೆ ಮಾಡುತ್ತದೆ ”ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕರೋನವೈರಸ್ ರೋಗವನ್ನು ನಿಯಂತ್ರಿಸುವ ಪ್ರಯತ್ನಗಳ (ಕೋವಿಡ್ -19) ನಡುವೆ ವಲಸೆ ಕಾರ್ಮಿಕರ ವಿಷಯವು ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಆರೋಪ - ಪ್ರತ್ಯಾರೋಪದ ವಿಚಾರವಾಗಿದೆ.