ಅಹಮದಾಬಾದ್, ಮೇ 09 (Daijiworld News/MB) : ಗುಜಾರಾತ್ನಲ್ಲಿ ಕೊರೊನಾ ಸೋಂಕಿತರ ಪ್ರಕರಣ ಏರಿಕೆಯಾಗುತ್ತಿರುವ ಕಾರಣದಿಂದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯ(ಏಮ್ಸ್) ಮುಖ್ಯಸ್ಥರಿಗೆ ಗುಜರಾತ್ಗೆ ಆಗಮಿಸುವಂತೆ ಸೂಚನೆ ನೀಡಿದ್ದು ಏಮ್ಸ್ ಮುಖ್ಯಸ್ಥರು ಗುಜರಾತ್ಗೆ ವಾಯುಸೇನೆಯ ವಿಶೇಷ ವಿಮಾನದಲ್ಲಿ ತೆರಲಿದ್ದಾರೆ.
ಕೊರೊನಾ ಕುರಿತಾದ ಚಿಕಿತ್ಸೆಯ ಕುರಿತಾಗಿ ಏಮ್ಸ್ ಮುಖ್ಯಸ್ಥರು ವೈದ್ಯರುಗಳೊಂದಿಗೆ ಸಂವಹನ ನಡೆಸಲಿದ್ದಾರೆ. ಶುಕ್ರವಾರ ಸಂಜೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹಾಗೂ ಏಮ್ಸ್ ಮೆಡಿಸಿನ್ ವಿಭಾಗದ ಡಾ. ಮನೀಶ್ ಸುರೇಜಾ ಅಹಮದಾಬಾದ್ಗೆ ತೆರಳಿದ್ದಾರೆ ಎಂದು ಗೃಹ ಸಚಿವಾಲಯ ಮೂಲಗಳಿಂದ ತಿಳಿದು ಬಂದಿದೆ.
ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅಧಿಕ ಪ್ರಕರಣಗಳು ದಾಖಲಾಗಿದ್ದು ಗುಜರಾತ್ ಎರಡನೇ ಸ್ಥಾನದಲ್ಲಿದೆ. ಗುಜರಾತ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7402 ಕ್ಕೆ ಏರಿಕೆಯಾಗಿದ್ದು ಈವರೆಗೂ 449 ಮಂದಿ ಸಾವನ್ನಪ್ಪಿದ್ದಾರೆ.