ಬೆಂಗಳೂರು, ಮೇ 09 (Daijiworld News/MSP): ಕರ್ನಾಟಕವೂ ಕೊರೊನಾ ವಿರುದ್ದ ಉತ್ಸಾಹದಿಂದ ಹೋರಾಡುತ್ತಿದ್ದು, ಇದುವರೆಗೆ ಒಂದು ಲಕ್ಷ ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಏರಿಕೆಯಾಗುತ್ತಿದೆ ಆದರೆ ಅಷ್ಟೇ ತ್ವರಿತವಾಗಿ ಕೊರೊನಾ ಸೋಂಕಿತರ ಪತ್ತೆಗಾಗಿ ಪರೀಕ್ಷೆ ಕೂಡ ನಡೆಯುತ್ತಿದೆ. ರಾಜ್ಯದಲ್ಲಿ ಇದುವರೆಗೆ ಒಂದು ಲಕ್ಷ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿರುವ 60 ಲ್ಯಾಬ್ ಗಳಿಂದ 10 ಸಾವಿರ ಪರೀಕ್ಷೆಯನ್ನು ಪ್ರತಿ ದಿನ ನಡೆಸುವ ಸಾಮರ್ಥ್ಯ ಬರಲಿದೆ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಕರ್ನಾಟಕ 1 ಲಕ್ಷ ಕೊರೋನಾ ಪರೀಕ್ಷೆಯನ್ನು ಮುಗಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿದೆ. ಈ ಮೂಲಕ ಕೊರೋನಾ ಸೋಂಕು ಪತ್ತೆ ಕಾರ್ಯ ವುರುಕಿನಿಂದ ಸಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಮುಂದುವರೆದು, ರಾಜ್ಯದಲ್ಲಿ 60 ಕೊರೋನಾ ಪತ್ತೆ ಪರೀಕ್ಷಾ ಕೇಂದ್ರಗಳು ಈ ತಿಂಗಳ ಅಂತ್ಯಕ್ಕೆ ಆರಂಭವಾಗಲಿವೆ. ಹೀಗಾಗಿ ಈ ತಿಂಗಳ ಅಂತ್ಯಕ್ಕೆ ಪ್ರತಿದಿನ ರಾಜ್ಯದಲ್ಲಿ 10 ಸಾವಿರ ಕೊರೋನಾ ಪರೀಕ್ಷೆ ಮಾಡುವಂತ ಸಾಮರ್ಥ ಹೆಚ್ಚಲಿದೆ. ಹೊಸ ದಾಖಲೆಯನ್ನು ರಾಜ್ಯ ಸರ್ಕಾರ ನಿರ್ಮಿಸಲಿದೆ ಎಂಬುದಾಗಿ ಹೇಳಿದ್ದಾರೆ.