ಪ್ರಧಾನಿ ಮೋದಿ ಅವರ ಆಶಯಕ್ಕೆ ತಕ್ಕಂತೆ ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ನಿಯಮ ಪಾಲನೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮ ಸರ್ಕಾರ ಕೈಗೊಂಡ ಕೆಲ ತೀರ್ಮಾನಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಿನ್ನಾಭಿಪ್ರಾಯಗಳು ಬಂದಿವೆ. ಆದರೆ, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸಮಾಜದಲ್ಲಿ ಬೇರೆ ಬೇರೆ ಅಭಿಪ್ರಾಯ ಇರುವುದು ಸಹಜ. ಪ್ರಶ್ನೆ ಮಾಡುವುದು, ಟೀಕೆ ಮಾಡುವುದು ಅವರವರ ಹಕ್ಕು, ಆದರೆ, ಸರ್ಕಾರ ಸದುದ್ದೇಶವನ್ನು ಯಾರೂ ಪ್ರಶ್ನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಒಂದೆರಡು ಖಾತೆಗಳನ್ನು ನಮಗೆ ನಿಭಾಯಿಸಲು ಒತ್ತಡವೆನಿಸಿದಾಗ ಮುಖ್ಯಮಂತ್ರಿಗಳು ಈ ಕಠಿಣವಾದ ಸವಾಲಿನ ಸಮಯದಲ್ಲಿ ತಾಳ್ಮೆಯಿಂದ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ನಿಯೋಗ ಬಂದರೂ ನಿರಾಕರಿಸದೇ ಭೇಟಿ ಮಾಡುತ್ತಾರೆ. ಒಂದು ಲಕ್ಷದಷ್ಟು ಮೊತ್ತಸದ ಚೆಕ್ ನೀಡಲು ಬಂದವರು ಫೋಟೋ ಕೇಳಿದಾತಗ ನಿಂತು ಸಹಕರಿಸುತ್ತಾರೆ. ಇಷ್ಟೆಲ್ಲಾ ಒತ್ತಡವಿದ್ದರು ಇದು ಹೇಗೆ ಸಾಧ್ಯ ಎಂದು ಅವರನ್ನು ಕೇಳಿದೆ, ಅದಕ್ಕೆ ಅವರು ಇದು ಒಂದು ಸವಾಲು. ರಾಜ್ಯದ ಜನರ ಹಿತಕ್ಕಾಗಿ ಈ ಎಲ್ಲಾ ಸವಾಲುಗಳನ್ನು ಎದುರಿಸಬೇಕು. ಆದ ಕಾರಣ ಗಟ್ಟಿಯಾಗಿ ಎದುರಿಸುತ್ತಿದ್ದೇನೆ ಎಂದು ತಿಳಿಸಿದರು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ನಮ್ಮ ರಾಜ್ಯಕ್ಕೆ ಉತ್ತಮವಾದ ನಾಯಕ ಸಿಕ್ಕಿದ್ದಾರೆ. ಅವರ ನೇತೃತ್ವ, ಕಾರ್ಯಶೈಲಿ ಮ್ಮ ರಾಜ್ಯವನ್ನು ಬಹುತೇಕ ರಾಜ್ಯಗಳಿಗೆ ಹೋಲಿಸಿದರೆ ಸಮಾಧಾನಕರ ಸ್ಥಿತಿಯಲ್ಲಿಡುವಂತೆ ಮಾಡಿದೆ ಎಂದಿದ್ದಾರೆ.
ಕೆಳಗೆ ಪೋಸ್ಟ್ ಮಾಡಿರುವ ಎರಡು ಫೋಟೋಗಳು ಎರಡು ಬೇರೆ ಸಂದರ್ಭಕ್ಕೆ ಸಂಬಂಧಿಸಿದ್ದು. ಆದರೆ ಎರಡೂ ನಮ್ಮ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ್ದು. ...
Posted by Suresh Kumar S on Friday, 8 May 2020