ವಿಶಾಖಪಟ್ಟಣಂ, ಮೇ 09 (Daijiworld News/MB) : ಭೋಪಾಲ್ ದುರಂತವನ್ನು ನೆನಪಿಸಿದ ವಿಶಾಖಪಟ್ಟಣಂನ ವೆಂಕಟಾಪುರಂನ ಎಲ್ ಜಿ ಪಾಲಿಮರ್ಸ್ ಘಟಕದಲ್ಲಾದ ಅನಿಲ ಸೋರಿಕೆಯನ್ನು ತಡೆಯುವ ಕಾರ್ಯದಲ್ಲಿ ಎಲ್ ಜಿ ಪಾಲಿಮರ್ಸ್ ನ 9 ಸದಸ್ಯರ ತಜ್ಞರ ತಂಡ ನಿರತವಾಗಿದ್ದು ಈ ನಡುವೆ ಈ ಅನಿಲ ಸೋರಿಕೆಗೆ 20 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಿಡಲಾಗುವ ಸ್ಟೈರೀನ್ 180 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದ್ದು ಎಂದು ವರದಿಯಾಗಿದೆ.
೧೨ ಜನರನ್ನು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳನ್ನು ಬಲಿ ಪಡೆದಿರುವ ಈ ಅನಿಲ ಸೋರಿಕೆಗೆ ಕಾರಣ ವಿಶ್ಲೇಷಣೆ ಮಾಡಿದಾಗ ಟ್ಯಾಂಕ್ನಲ್ಲಿ ತಾಪಮಾನ ಏರಿಕೆ ಎಂದು ತೀರ್ಮಾನಿಸಿದೆ.
ಶುಕ್ರವಾರ ಸ್ಟೈರೀನ್ ತಾಪಮಾನವನ್ನು 120 ಡಿಗ್ರಿಗೆ ತರಲಾಗಿದ್ದು ಇನ್ನು ತಾಪಮಾನ 100 ಡಿಗ್ರಿಗಿಂತ ಕಡಿಮೆಯಾದರೆ ಮಾತ್ರ ಸ್ಟೈರೀನ್ ಸಂಗ್ರಹಿಸಿಡುವ ಟ್ಯಾಂಕ್ ಸುರಕ್ಷಿತವಾಗಿರಲು ಸಾಧ್ಯ ಎಂದು ಹೇಳಲಾಗಿದೆ. ಆದರೆ ಇನ್ನು ತಾಪಮಾನವನ್ನು ಕಡಿಮೆ ಮಾಡುವುದು ಕಷ್ಟ ಎಂದು ತಜ್ಞರು ಹೇಳಿರುವುದಾಗಿ ವರದಿ ತಿಳಿಸಿದೆ.
ಈ ದ್ರವ್ಯವನ್ನು ಟ್ಯಾಂಕ್ ನಿಂದ ಹೊರತೆಗೆಯಲು ಸಾಧ್ಯವಾದ ಕಾರಣ ಸ್ಟೈರೀನ್ನ್ನು ಪಾಲಿಮರೀಕರಣಗೊಳಿಸಿ ಎಂಬಿಎಂನ್ನು ವೇಗವರ್ಧಕವಾಗಿ ಸೇರಿಸಲಾಗುತ್ತದೆ. ಇಲ್ಲಿಯವರೆಗೆ 18 ಸಾವಿರ ಟನ್ನಷ್ಟು ಸ್ಟೈರೀನ್ನಲ್ಲಿ ಶೇಕಡಾ 50ನ್ನು ಪಾಲಿಮರೀಕರಣಗೊಳಿಸಲಾಗಿದೆ.
ಪೊಲೀಸರು, ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ತಂಡ ಕಾರ್ಖಾನೆಯ ಸುತ್ತಮುತ್ತ ಗ್ರಾಮಗಳ ಮೇಲೆ ಕಣ್ಗಾವಲಿರಿಸಿದ್ದು ತಮ್ಮ ಪ್ರಾಣ ಲೆಕ್ಕಿಸದೇ ಪೊಲೀಸರು ಮಾಡುತ್ತಿರುವ ಕರ್ತವ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.