ಬೆಂಗಳೂರು, ಮೇ 09 (DaijiworldNews/PY) : ಸ್ವತಂತ್ರ ಬಂದು 20 ವರ್ಷಗಳ ನಂತರ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ದೇಶದ ಅನೇಕ ರಾಜ್ಯದಲ್ಲಿ ನಿಷೇಧವಿದೆ. ಅಂದರೆ ಇದು ಅನಿವಾರ್ಯವಲ್ಲ ಮುಖ್ಯಮಂತ್ರಿಗಳೇ ದಂಧೆ ಹಿಂದಿನ ದಂಧೆ ಏನು? ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸ್ವತಂತ್ರ ಬಂದು 20 ವರ್ಷಗಳ ನಂತರ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ದೇಶದ ಅನೇಕ ರಾಜ್ಯದಲ್ಲಿ ನಿಷೇಧವಿದೆ. ಅಂದರೆ ಇದು ಅನಿವಾರ್ಯವಲ್ಲ ಮುಖ್ಯಮಂತ್ರಿಗಳೇ ದಂಧೆ ಹಿಂದಿನ ದಂಧೆ ಏನು? ಪ್ರತಿದಿನ ನಿಮ್ಮ ಭಾವ ಚಿತ್ರದೊಂದಿಗೆ ಕೊರೊನಾ ಮಾಹಿತಿ ನೀಡುವ ಸರ್ಕಾರ ಜೊತೆಯಲ್ಲಿ ಮದ್ಯದಿಂದ ಆಗುತ್ತಿರುವ ಸಾವು ಕೊಲೆ ಅಪರಾಧ ಮಾಹಿತಿ ನೀಡಲಿ ಎಂದಿದ್ದಾರೆ.
ಕನ್ನಡ ಕಟ್ಟುವ ಕೆಲಸ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಆಗಬೇಕು. ಹಣದ ಕಾರಣ ನೀಡಿ ಅಧ್ಯಕ್ಷರು ವಿವಿಧ ಪ್ರಶಸ್ತಿ, ವಿದ್ಯಾರ್ಥಿ ವೇತನ ಸ್ಥಗಿತ ಎಂದಿದ್ದಾರೆ. ಪಲಾಯನವೇ ಇಲ್ಲಾ ಆತ್ಮ ವಂಚನೆಯೇ? ಸರ್ಕಾರ ಸಾಂಕೇತಿಕ. ನಿಮ್ಮ ಸಂಬಳ, ಸಾರಿಗೆ ಸಿಬ್ಬಂದಿ ಸವಲತ್ತು ಕಡಿತ ಮಾಡಿಕೊಳ್ಳಿ. ಅವಶ್ಯಕತೆ ಬಂದರೆ ಜೋಳಿಗೆ ಹಿಡಿಯಿರಿ. ಪ್ರಾಧಿಕಾರವು ಬೆಳಗಲಿ ಎಂದು ಹೇಳಿದ್ದಾರೆ.