ಭೋಪಾಲ್, ಮೇ 09 (Daijiworld News/MB) : ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಗೂಡ್ಸ್ ರೈಲು ಹರಿದು ಸಾವನ್ನಪ್ಪಿದ ಕಾರ್ಮಿಕರು ಊರಿಗೆ ತೆರಳಲು ಪಾಸ್ ನೀಡಿ ಎಂದು ಮಧ್ಯಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಊರಿಗೆ ಮರಳಲು ಪಾಗೆ ಅರ್ಜಿ ಹಾಕಿದ್ದೇವು ಎಂದು ರೈಲು ಅಪಘಾತದಲ್ಲಿ ಬದುಕುಳಿದ ಕಾರ್ಮಿಕ ಹೇಳಿದ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು ಕಾರ್ಮಿಕರ ಸಾವಿಗೆ ಮಧ್ಯಪ್ರದೇಶ ಸರ್ಕಾರದ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆಯೇ ಕಾರಣ. ಕಾರ್ಮಿಕರು ಊರಿಗೆ ಮರಳಲು ಪಾಸ್ಗೆ ಮನವಿ ಮಾಡಿದ ಬಳಿಕ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿ ಟ್ವೀಟ್ ಮಾಡಿ ಪಾಸ್ ನೀಡಿದ್ದಲ್ಲಿ ರೈಲು ದುರಂತದಲ್ಲಿ ಮೃತಪಟ್ಟ 16 ಜೀವಗಳನ್ನು ರಕ್ಷಣೆ ಮಾಡಬಹುದಿತ್ತು. ಶಿವರಾಜ್ ಜಿ, ಈ ಸಾವುಗಳು ಜಂಗಲ್ರಾಜ್ನ ಪರಿಣಾಮ ಎಂದು ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ ಮಹಾರಾಷ್ಟ್ರದ ಔರಂಗಾಬಾದ್ನ ಕರ್ಮಾಡ್ ಸಮೀಪ ರೈಲು ಹಳಿಯ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 16 ಮಂದಿ ಸಾವನ್ನಪ್ಪಿದ್ದಾರೆ.