ಧಾರವಾಡ, ಮೇ 09 (DaijiworldNews/PY) : ಜನ ಸಹಕಾರ ಕೊಟ್ಟಾಗ ಮಾತ್ರ ಲಾಕ್ಡೌನ್ ಯಶಸ್ಸು ಆಗುತ್ತದೆ. ಹಾಗೆಯೇ ಜನ ಮದ್ಯಪಾನ ಮಾಡುವುದಿಲ್ಲ ಎಂದು ನಿರ್ಣಯ ತೆಗೆದುಕೊಳ್ಳಲಿ. ಸಾವಿರ ಜನ ತಗೊಳ್ಳಿ, ಲಕ್ಷ ಜನ ಸ್ವಯಂ ನಿರ್ಧಾರ ತೆಗದುಕೊಳ್ಳಲಿ. ಎಲ್ಲವನ್ನು ಸರ್ಕಾರವೇ ಮಾಡಬೇಕಾ? ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಮದ್ಯ ಮಾರಾಟ ನಿಷೇಧಕ್ಕೆ ಬಿಜೆಪಿ ಶಾಸಕ ಬೆಲ್ಲದ ಆಗ್ರಹ ಬಗ್ಗೆ ಧಾರವಾಡದಲ್ಲಿ ಮಾತನಾಡಿದ ಅವರು, ನಾನು ವೈಯುಕ್ತಿಕ ಅಭಿಪ್ರಾಯಗಳಿಗೆ ಉತ್ತರ ನೀಡುವುದಿಲ್ಲ. ಸರ್ಕಾರ ನಡೆಸುವುದೇ ಬೇರೆ, ಅಭಿಪ್ರಾಯ ಹೇಳುವುದೇ ಬೇರೆ. ಎಲ್ಲೆಲ್ಲಿ ಅಭಿಪ್ರಾಯ ತಿಳಿಸಬೇಕು ಅಲ್ಲಿ ತಿಳಿಸುತ್ತೇವೆ. ಜನರೇ ವೈಯುಕ್ತಿಕವಾಗಿ ಮದ್ಯ ಬೇಡ. ಲಾಕ್ಡೌನ್ ಮುಂಚೆಯೇ ಮದ್ಯ ಮಾರಾಟ ಇತ್ತಲ್ಲ, ಆಗ ಯಾಕೆ ಮದ್ಯ ನಿಷೇಧದ ಬಗ್ಗೆ ಚರ್ಚೆ ಆಗಲಿಲ್ಲ ಎಂದು ಹೇಳಬೇಕು ಎಂದರು.
ಲಾಕ್ಡೌನ್ ಯಶಸ್ಸು ಕಾಣಲು ಜನರ ಸಹಕಾರ ಮುಖ್ಯ. ಅದೇ ರೀತಿ ಜನರು ಮದ್ಯಪಾನ ಮಾಡುವುದಿಲ್ಲ ಎಂದು ತೀರ್ಮಾನ ಮಾಡಲಿ. ಸಾವಿರ ಜನ ತೆಗೆದುಕೊಳ್ಳಿ, ಲಕ್ಷ ಜನರು ಸ್ವಯಂ ತೀರ್ಮಾನ ಕೈಗೊಳ್ಳಲಿ. ಸರ್ಕಾರವೇ ಎಲ್ಲವನ್ನು ಮಾಡಬೇಕಾ? ಮಠಕ್ಕೆ ಕುಡುಕರಿಗೆ ಪ್ರವೇಶವಿಲ್ಲ ಎಂದು ಮಠಾಧೀಶರು ಹೇಳಲಿ. ಹಾಗೆಯೇ ಸ್ವಾಮೀಜಿಗಳು, ಧರ್ಮಗುರುಗಳು, ಪ್ರಾರ್ಥನಾ ಮಂದಿರಗಳು ತೀರ್ಮಾನ ಕೈಗೊಳ್ಳಲಿ ಎಂದು ತಿಳಿಸಿದರು.
ಪ್ರಾರ್ಥನಾ ಮಂದಿರಕ್ಕೆ ಕುಡುಕರಿಗೆ ಪ್ರವೇಶವಿಲ್ಲ ಎಂದು ಧರ್ಮಗುರುಗಳೇ ತೀರ್ಮಾನ ಮಾಡಲಿ. ಬಳಿಕ ಬಿಹಾರ, ಗುಜರಾತ್ನಲ್ಲಿ ಮದ್ಯ ಮಾರಾಟ ನಿಷೇಧ ವಿಚಾರವಾಗಿ ಮಾತನಾಡಿದ ಅವರು, ಗುಜರಾತ್ಗೆ ಒಂದು ಸಲ ಹೋಗಿ ಬನ್ನಿ, ಅಲ್ಲಿ ಏನಾಗುತ್ತಿದೆ ಎಂದು ಇಲ್ಲಿ ಡಿಬೇಟ್ ಮಾಡುವುದಲ್ಲ ಎಂದು ಮದ್ಯ ಮಾರಾಟ ಗುಜರಾತ್ನಲ್ಲಿ ಇದೆ ಎಂದು ಪರೋಕ್ಷವಾಗಿ ತಿಳಿಸಿದರು.