ನವದೆಹಲಿ, ಮೇ 10 (Daijiworld News/MB) : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ತನ್ನ ಕಬಂದ ಬಾಹುವನ್ನು ಚಾಚುತ್ತಲ್ಲೇ ಇದ್ದು ಮತ್ತೆ 62 ಸಿಆರ್ಪಿಎಫ್ ಯೋಧರಿಗೆ ಕೊರೊನಾ ತಗುಲಿದ್ದು ಒಟ್ಟಾರೆಯಾಗಿ 234 ಯೋಧರಲ್ಲಿ ಕೊರೊನಾ ಪಾಸಿವಿಟ್ ಆಗಿದೆ.
ಈ ಕುರಿತು ಮಾಹಿತಿ ನೀಡಿದ ಸಿಆರ್ಪಿಎಫ್ನ ಅಧಿಕಾರಿಗಳು, ಮತ್ತೆ 62 ಮಂದಿ ಯೋಧರಲ್ಲಿ ಕೋರೋನಾ ದೃಢಪಟ್ಟಿದೆ, ಹಾಗಾಗಿ ಒಟ್ಟಾರೆಯಾಗಿ 234 ಯೋಧರಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಮೊದಲು ಬಿಎಸ್ಎಫ್ ಪಡೆಯ 35 ಯೋಧರಲ್ಲಿ ಕೊರೊನಾ ದೃಢಪಟ್ಟಿದ್ದು ಒಟ್ಟಾರೆಯಾಗಿ ಗಡಿ ಭದ್ರತಾ ಪಡೆಯಲ್ಲಿ 256 ಪ್ರಕರಣಗಳು ಸಕ್ರಿಯವಾಗಿದೆ. ಹಾಗೆಯೇ ಇಬ್ಬರು ಮೃತಪಟ್ಟಿದ್ದು ಇಬ್ಬರು ಗುಣಮುಖರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಶುಕ್ರವಾರದವರೆಗೂ 172 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಶನಿವಾರ ರಾತ್ರಿಯವರೆಗೆ 62 ಪ್ರಕರಣಗಳು ದೃಢಪಟ್ಟು ಒಟ್ಟು 234 ಸಿಆರ್ಪಿಎಫ್ ಯೋಧರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ 234 ಪ್ರಕರಣಗಳ ಪೈಕಿ ಓರ್ವ ಯೋಧ ಕೊರೊನಾಗೆ ಬಲಿಯಾಗಿದ್ದು ಇಬ್ಬರು ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.