ಐಜ್ವಾಲ್, ಮೇ 10 (Daijiworld News/MB) : ದೇಶಾದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವ ಈ ಸಂದರ್ಭದಲ್ಲಿ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮುಕ್ತಿ ಪಡೆದ ಐದನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈಶಾನ್ಯ ಭಾರತದ ಮಿಜೋರಾಂ.
ಈ ಬಗ್ಗೆ ಮಾಹಿತಿ ನೀಡಿರುವ ಮಿಜೋರಾಂ ಆರೋಗ್ಯ ಸಚಿವರಾದ ಡಾ.ಆರ್ ಲಲ್ತಾಂಗ್ಲಿಯಾನ ಅವರು, ಇಲ್ಲಿನ ಝೋರಂ ವೈದ್ಯಕೀಯ ಕಾಲೇಜಿನಲ್ಲಿ ಕಳೆದ 45 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಈ ರಾಜ್ಯದ ಕೊನೆಯ ಕೊರೊನಾ ಸೋಂಕಿತ ವ್ಯಕ್ತಿ ಬಿಡುಗಡೆಯಾಗಿದ್ದು ಇದೀಗ ರಾಜ್ಯದಲ್ಲಿ ಯಾವುದೇ ಕೊರೊನಾ ಸೋಂಕಿತರು ಇಲ್ಲ. ಅವರ ಇತ್ತೀಚಿನ ಎರಡು ವರದಿಗಳು ನೆಗೆಟಿವ್ ಬಂದಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಮೊದಲು ಮಣಿಪುರ, ಸಿಕ್ಕಿಂ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳು ಕೊರೊನಾ ಮುಕ್ತವಾದ ರಾಜ್ಯಗಳಾಗಿವೆ.