ಬೆಂಗಳೂರು, ಮೇ 10 (DaijiworldNews/PY) : ವಿಶ್ವ ತಾಯಂದಿರ ದಿನವಾದ ಇಂದು ಹಲವು ರಾಜಕೀಯ ನಾಯಕರು, ಸಿನೆಮಾ ತಾರೆಯರು ಹಾಗೂ ಆಟಗಾರರು ಜನತೆ ಶುಭಕೋರಿದ್ದು, ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಾಯಂದಿರ ವಾತ್ಸಲ್ಯ, ಪ್ರೀತಿ ಹಾಗೂ ಮಮತೆಯನ್ನು ಹಂಚಿಕೊಂಡಿದ್ದಾರೆ.
ಗುರು-ಹಿರಿಯರ ಗೌರವಿಸುವುದು, ತಂದೆ-ತಾಯಂದಿರ ಸೇವೆ ಮಾಡುವುದು ಭಾರತೀಯರ ಸಂಸ್ಕಾರ. ಅದೇನೇ ಕಷ್ಟ ಇದ್ದರೂ ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹುವ ಅಮ್ಮನೇ ಪ್ರತ್ಯಕ್ಷ ದೇವರು. ಏಳೇಳು ಜನ್ಮತಾಳಿದರೂ ಅಮ್ಮನ ಋಣ ತಿರಿಸಲಾಗದು. ಜನ್ಮ ನೀಡಿದವರ ಸೇವೆ ಮಾಡೋದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ. ಮಾತೃದೇವೋಭವ|| ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇಂದು ವಿಶ್ವ ತಾಯಂದಿರ ದಿನ. ಪ್ರೀತಿ, ಮಮತೆ, ತ್ಯಾಗಕ್ಕೆ ಈ ದಿನ ಸಂಕೇತ. ಆದರೆ ತಾಯ್ತನ ಅಜರಾಮರ. ನನ್ನ ವ್ಯಕ್ತಿತ್ವದ ಮೇಲೆ ನನ್ನಮ್ಮನ ಪ್ರಭಾವ ಗಾಢ. ಎಲ್ಲರನ್ನೂ ಪ್ರೀತಿಯಿಂದ ಕಾಣುವ, ಬಡವರಿಗೆ ಮರುಗುವ, ಕಷ್ಟಕ್ಕೆ ಕರಗುವ ಆಕೆಯ ಗುಣಗಳು ನನ್ನನ್ನು ರೂಪಿಸಿವೆ. ನನ್ನಮ್ಮನಿಗೆ ಹಾಗೂ ವಿಶ್ವದ ಮಾತೃ ಹೃದಯಗಳಿಗೆ ನನ್ನ ಶುಭಾಶಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ನಿಮ್ಮ ಪ್ರೀತಿ ಹಾಗೂ ನೀವು ನನಗಾಗಿ ಮಾಡಿದ ಎಲ್ಲಾ ತ್ಯಾಗಗಳಿಗೆ ಧನ್ಯವಾದ ಸಲ್ಲಿಸಲು ಯಾವುದೇ ಪದಗಳು ಸಾಲುವುದಿಲ್ಲ. ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ ಅಮ್ಮಾ! ನಿನಗೆ ತಾಯಂದಿರ ದಿನದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಜೀವ ಕೊಟ್ಟ ನನ್ನ ಹೆತ್ತ ತಾಯಿಗೆ, ಜೀವನ ಕೊಟ್ಟ ನನ್ನ ಕನ್ನಡ ತಾಯಿಗೆ, ಅನ್ನ ಕೊಟ್ಟ ಭೂತಾಯಿಗೆ, ತಮ್ಮ ಹೃದಯಗಳಲ್ಲಿ ಪ್ರೀತಿಯ ಸ್ಥಾನ ಕೊಟ್ಟು, ನನ್ನನ್ನು ಅಕ್ಕರೆಯಿಂದ ಬೆಳೆಸುತ್ತಿರುವ ಎಲ್ಲಾ ಮಾತೃಹೃದಯಿ ಸ್ವರೂಪ ಅಭಿಮಾನಿ ತಾಯಂದಿರಿಗೆ ನಾನು ಸದಾ ಋಣಿ...
ವಿಶ್ವದ ಎಲ್ಲ ಅಮ್ಮಂದಿರಿಗೆ ಈ ಕಿಚ್ಚನ ಶುಭಾಶಯಗಳು ಎಂದಟು ಟ್ವೀಟ್ನಲ್ಲಿ ಶುಭಾಶಯ ತಿಳಿಸಿದ್ದಾರೆ.