ಬೆಂಗಳೂರು, ಮೇ 10 (Daijiworld News/MB) : ರಾಜ್ಯ ಇಂದು ಮಧ್ಯಾಹ್ಮ 12 ಗಂಟೆಗೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರವಾಗಿ ರಾಜ್ಯದಲ್ಲಿ ಮತ್ತೆ 53 ಜನರಿಗೆ ಕೊರೊನಾ ದೃಢಪಟ್ಟಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 847 ಕ್ಕೆ ಏರಿಕೆಯಾಗಿದೆ. ಒರ್ವ ಸೋಂಕಿತೆ ಸಾವನ್ನಪ್ಪಿದ್ದು ರಾಜ್ಯದಲ್ಲಿ ಒಟ್ಟು 31 ಜನರು ಕೊರೊನಾಗೆ ಬಲಿಯಾಗಿದ್ದಾರೆ.
ಬೆಳಗಾವಿ 22, ಶಿವಮೊಗ್ಗ 8, ಬಾಗಲಕೋಟೆ 8, ಉತ್ತರಕನ್ನಡ 7, ಬೆಂಗಳೂರು 3, ಕಲಬುರ್ಗಿ 3, ದಾವಣಗೆರೆ, ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿದೆ.
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಶಿವಮೊಗ್ಗ ಜಿಲ್ಲೆಗೆ ಮೂರು ದಿನಗಳಲ್ಲಿ 289 ಜನರು ಹೊರ ರಾಜ್ಯಗಳಿಂದ ಬಂದಿದ್ದರು. ಅವರಲ್ಲಿ 8 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 7 ಮಂದಿ ಶಿಕಾರಿಪುರ ಮತ್ತು ಒಬ್ಬರು ತೀರ್ಥಹಳ್ಳಿಯವರು. ಎಲ್ಲರನ್ನೂ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ಕೇಂದ್ರದ ಪ್ರತ್ಯೇಕ ವಾರ್ಡ್ನಲ್ಲಿ ಇರಿಸಲಾಗಿದೆ. ಶಿವಮೊಗ್ಗದ ಯಾರಿಗೂ ಪಾಸಿಟಿವ್ ಇಲ್ಲ. ಗುಜರಾತ್ನಿಂದ ಅನುಮತಿ ಪಡೆದು ಬಂದವರಲ್ಲಿ ಮಾತ್ರ ಇದೆ. ಹಾಗಾಗಿ ಗ್ರೀನ್ ಜೋನ್ಗೆ ಧಕ್ಕೆ ಇಲ್ಲ ಎಂದು ತಿಳಿಸಿದ್ದಾರೆ.
ಉತ್ತರಕನ್ನಡದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲ್ಲೇ ಇದ್ದು ಶನಿವಾರ 7 ಪ್ರಕರಣ ದೃಢಪಟ್ಟಿತ್ತು. ಭಾನುವಾರವೂ ಕೂಡಾ 7 ಪ್ರಕರಣಗಳು ದೃಢಪಟ್ಟಿದೆ. ಈವರೆಗೆ ಒಟ್ಟು 39 ಜನರಿಗೆ ಸೋಂಕು ತಗುಲಿದ್ದು, 11 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಕಳೆದ ಮೂರು ದಿನಗಳ ಅವಧಿಯಲ್ಲಿ 27 ಜನರಿಗೆ ಕೋವಿಡ್ 19 ಖಚಿತವಾಗಿವೆ. ಎಲ್ಲ ಪ್ರಕರಣಗಳೂ ಕಂಟೈನ್ಮೆಂಟ್ ವಲಯವಾಗಿರುವ ಭಟ್ಕಳದಲ್ಲೇ ವರದಿಯಾಗಿವೆ.