ನವದೆಹಲಿ, ಮೇ 10 (Daijiworld News/MB) : ವಲಸೆ ಕಾರ್ಮಿಕರಿಗಾಗಿ ಹೆಚ್ಚಿನ ರೈಲುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಲಸೆ ಕಾರ್ಮಿಕರಲ್ಲಿ ಮನವಿ ಮಾಡಿದ್ದಾರೆ.
ಭಾನುವಾರ ದೆಹಲಿಯಲ್ಲಿ ಮಾತನಾಡಿದ ಅವರು, ವಲಸೆ ಕಾರ್ಮಿಕರಿಗಾಗಿ ಹೆಚ್ಚಿನ ರೈಲುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕಾಲ್ನಡಿಗೆಯಲ್ಲಿ ಅವರು ಪ್ರಯಾಣ ಮಾಡಬಾರದೆಂದು ನನ್ನ ಮನವಿ. ಇದು ಸುರಕ್ಷಿತವಲ್ಲ. ನಿಮ್ಮ ಜವಾಬ್ದಾರಿ ನಮ್ಮದು, ನಿಮ್ಮ ಕಾಳಜಿಗಾಗಿ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲೇ ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದ ಅವರು, ದೆಹಲಿಯ ಒಟ್ಟು 7000 ಕೊರೊನಾ ಸೋಂಕಿತರಲ್ಲಿ ಸುಮಾರು 1500 ಸೋಂಕಿತರು ಆಸ್ಪತ್ರೆಯಲ್ಲಿದ್ದು ಈ ಪೈಕಿ 27 ಮಂದಿ ಮಾತ್ರ ವೆಂಟಿಲೇಟರ್ನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.