ಬೆಂಗಳೂರು, ಮೇ 10 (Daijiworld News/MB) : ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಹುಟ್ಟುಹಬ್ಬ ಮೇ 15 ರಂದಾಗಿದ್ದು ಆ ದಿನ ತಾನು ಊರಲ್ಲಿ ಇರುವುದಿಲ್ಲ, ಹುಟ್ಟು ಹಬ್ಬಕ್ಕೆ ಶುಭಕೋರಲು ಯಾರೂ ಬರಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಯಾವುದೇ ನಾಯಕರಾಗಲಿ, ಪಕ್ಷದ ಕಾರ್ಯಕರ್ತರಾಗಲಿ, ಅಭಿಮಾನಿ ಬಂಧುಗಳಾಗಲಿ, ಕನಕಪುರ ಕ್ಷೇತ್ರದವರಾಗಲಿ ಯಾರೂ ಕೂಡ ಸದಾಶಿವನಗರ ನಿವಾಸಕ್ಕಾಗಲಿ, ಪಕ್ಷದ ಕಚೇರಿಗಾಗಲಿ ಬರುವುದು ಬೇಡ. ಇದನ್ನು ಯಾರೂ ಕೂಡಾ ಅನ್ಯತ ಭಾವಿಸಬಾರದು ಎಂದು ವಿನಂತಿಸಿದ್ದಾರೆ.
ಕೆಲವೊಂದು ಅನಿವಾರ್ಯ ಕಾರಣದಿಂದಾಗಿ ಮೇ 14 ರಿಂದ ಮೂರು ದಿನಗಳ ಕಾಲ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ, ಆದ್ದ ಕಾರಣದಿಂದಾಗಿ ನೀವು ಬರಬಾರದು ಎಂದು ತಿಳಿಸಿದ್ದಾರೆ.