ನವದೆಹಲಿ, ಮೇ 10 (DaijiworldNews/PY) : ದೆಹಲಿಯಲ್ಲಿ ಭಾನುವಾರ ಮಧ್ಯಾಹ್ನ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರದ ಪ್ರಕಾರ, 1.45ಕ್ಕೆ ಭೂಕಂಪಿಸಿದೆ. ಈವರೆಗೂ ಯಾವುದೇ ಜೀವ ಹಾನಿಯಾದ ಬಗ್ಗೆ ಮಾಹಿತಿಯಿಲ್ಲ. ದೆಹಲಿಯ ಪೊಲೀಸರು ಭೂಕಂಪಿಸಿದ ಅನುಭವವಾಗಿರುವುದನ್ನು ಹೇಳಿದ್ದಾರೆ.
ಭೂಕಂಪಿಸಿದ ಹಿನ್ನಲೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಸ್ಥಳೀಯ ಆಡಳಿತ ತಿಳಿಸಿದೆ.
ಲಘು ಭೂಕಂಪವು ರಿಕ್ಟರ್ ಮಾಪಕದಲ್ಲಿ 3.4 ರಷ್ಟಿತ್ತು ಎಂಬುದಾಗಿ ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಭೂಕಂಪದ ದೃಶ್ಯಗಳು ಸೋಮಿಯಾ ವಿಹಾರದ ಹವಾಮಾನ ಇಲಾಖೆಯಲ್ಲಿ ದಾಖಲಾಗಿವೆ. ದೆಹಲಿಯಲ್ಲಿ ಇದು ಈ ಸಾಲಿನಲ್ಲಿ ಸಂಭವಿಸಿದ ಮೂರನೇ ಭೂಕಂಪವಾಗಿದೆ. ಈ ಬಗ್ಗೆ ಹವಾಮಾನ ಇಲಾಖೆಯ ಸಹಾಯವಾಣಿ ಹಲವು ನಾಗರಿಕರು ಕರೆ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಭೂಕಂಪವು ಭೂಮಿಯ 5 ಕಿಲೋ ಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಹಾಗೂ ಸುತ್ತಮುತ್ತಲು ಹಲವು ದೋಷಗಳಿವೆ. ಹಾಗಾಗಿ ಭೂಕಂಪಗಳಿಗೆ ಕಾರಣವಾಗಬಹುದು. ಆದರೆ ಏನಾಗಿದೆ ಎಂಬುವುದನ್ನು ನೋಡಲು ನಮ್ಮ ಕೇಂದ್ರದಲ್ಲಿ ದಾಖಲಾಗಿರುವ ದಾಖಲೆಗಳನ್ನು ಹಾಗೂ ಸಂಶೋಧನೆಗಳನ್ನು ನೋಡಬೇಕಾಗಿದೆ ಎಂದು ಭೂಕಂಪಶಾಸ್ತ್ರಜ್ಞ ಎ.ಪಿ. ಪಾಂಡೆ ತಿಳಿಸಿದ್ದಾರೆ.