ಬೆಂಗಳೂರು, ಮೇ 10 (Daijiworld News/MB) : ರಾಜ್ಯದಲ್ಲಿ ಮೇ 9ರ ಸಂಜೆ 5 ಗಂಟೆಯಿಂದ ಮೇ 10ರ ಸಂಜೆ 5 ಗಂಟೆವರೆಗೂ ಒಟ್ಟು 54 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ ತಿಳಿಸಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ಇಲಾಖೆ ಬಿಡುಗಡೆ ಮಾಡಿದ ಬುಲೆಟಿಂನ್ ಸಂದರ್ಭದಲ್ಲಿ 53 ಜನರಿಗೆ ಸೋಂಕು ತಗುಲಿದ್ದು ಸಂಜೆಯ ವೇಳೆಗೆ ಮತ್ತೊಂದು ಪ್ರಕರಣ ದೃಢಪಟ್ಟಿದೆ.
ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 848ಕ್ಕೆ ಏರಿಕೆಯಾಗಿದ್ದು ಒಟ್ಟು 31 ಜನರು ಕೊರೊನಾಗೆ ಬಲಿಯಾಗಿದ್ದಾರೆ. 422 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪ್ರಸ್ತುತ 388 ರೋಗಿಗಳು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಪೈಕಿ ಆರು ಜನರು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಹೊಸದಾಗಿ ಇಂದು ಬೆಂಗಳೂರಿನಲ್ಲಿ ಮೂವರಿಗೆ, ಭಟ್ಕಳ (ಉತ್ತರ ಕನ್ನಡ) 7, ಚಿಕ್ಕಬಳ್ಳಾಪುರದಲ್ಲಿ 1, ಕಲಬುರಗಿಯಲ್ಲಿ 4, ಶಿವಮೊಗ್ಗದಲ್ಲಿ 8, ಬೆಳಗಾವಿಯಲ್ಲಿ 22, ಬಾಗಲಕೋಟೆಯಲ್ಲಿ 8 ಮತ್ತು ದಾವಣಗೆರೆಯಲ್ಲಿ 1 ಪ್ರಕರಣ ಪತ್ತೆಯಾಗಿದೆ.