ಬೆಂಗಳೂರು, ಮೇ 10 (Daijiworld News/MB) : ಹೊರರಾಜ್ಯ, ದೇಶಗಳಿಂದ ತಾಯ್ನಾಡಿಗೆ ಬರುವವರು ಕ್ವಾರಂಟೈನ್ಗೆ ಒಳಪಡುವುದು ಕಡ್ಡಾಯ. ಕ್ವಾರಂಟೈನ್ ಸೌಲಭ್ಯಕ್ಕೆ ತಕ್ಕಂತೆ ಅವರನ್ನು ಕರೆಸಲಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಬೇರೆ ಬೇರೆ ರಾಜ್ಯ ದೇಶದಿಂದ ವಾಪಾಸ್ ಆಗುತ್ತಿರುವ ಕನ್ನಡಿಗರ ಕ್ವಾರಂಟೈನ್ ವ್ಯವಸ್ಥೆ ಬಗ್ಗೆ ಭಾನುವಾರ ಸಭೆ ನಡೆಸಿದ ಅವರು, ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವವರು ಆನ್ಲೈನ್ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಅವರು ಅನಿವಾರ್ಯವಾಗಿ ಅಲ್ಲಿ ಸಿಲುಕಿವರಾಗಿರಬೇಕು ಎಂದರು.
ಹಾಗೆಯೇ ಅವರು ರಾಜ್ಯಕ್ಕೆ ತಲುಪಿದ ಕೂಡಲೇ ಅವರವರ ಊರಿಗೆ ಹೋಗುವಂತಿಲ್ಲ, ಎಲ್ಲರೂ ಕಡ್ಡಾಯವಾಗಿ 14 ದಿನ ಕ್ವಾರಂಟೈನ್ಗೆ ಒಳಗಾಗಬೇಕು. ಹಾಗಾಗಿ ಕ್ವಾರಂಟೈನ್ಗೆ ಸಿದ್ಧ ಇರುವವರು ಮಾತ್ರ ನೊಂದಣೆ ಮಾಡಿ. ಬೇರೆ ರಾಜ್ಯದಲ್ಲಿ ತಪಾಸಣೆಗೆ ಒಳಪಟ್ಟಿದ್ದರೂ ಇಲ್ಲಿ ತಪಾಸಣೆ ಮಾಡಿಸಲೇ ಬೇಕು. ಹೊರ ರಾಜ್ಯದಿಂದ ರೈಲುಗಳಲ್ಲಿ ಬರುವವರ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.
ಅಲ್ಲದೇ ಇನ್ನು ಮುಂದೆ ಬೇರೆ ರಾಜ್ಯದಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹವನ್ನು ರಾಜ್ಯಕ್ಕೆ ತರುವಂತಿಲ್ಲ. ಎಲ್ಲಿ ಮೃತರಾಗಿರುತ್ತಾರೋ ಅಲ್ಲೇ ಶವ ಸಂಸ್ಕಾರ ಮಾಡಬೇಕು. ಕರ್ನಾಟಕದಲ್ಲಿ ಹೊರ ರಾಜ್ಯದವರು ಮೃತಪಟ್ಟರೆ ಇಲ್ಲೇ ಶವ ಸಂಸ್ಕಾರ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.