ನವದೆಹಲಿ, ಮೇ 11 (Daijiworld News/MB) : ಮೂರನೇ ಹಂತದ ಕೊರೊನಾ ಲಾಕ್ಡೌನ್ನಲ್ಲಿ ಕೊಂಚ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದನ್ನು ಹಿಂತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಗಳಿಗೆ ಆದೇಶಿಸುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಕೀಲ ರಾಜೀವ್ ಕುಮಾರ್ ರಂಜನ್ ಎಂಬುವವರು ಸಲ್ಲಿಸಿದ್ದು ಮದ್ಯ ಮಾರಾಟದಿಂದಾಗಿ ಲಾಕ್ಡೌನ್ನ ಉದ್ದೇಶವೇ ವಿಫಲವಾಗುವ ಅಪಾಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಮದ್ಯ ಮಾರಾಟ ಆರಂಭ ಮಾಡಿದ್ದರಿಂದ ಜನರು ಗುಂಪು ಸೇರುತ್ತಿದ್ದಾರೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ಇದರಿಂದಾಗಿ ಈವರೆಗೆ ಮಾಡಲಾಗಿದ್ದ ಲಾಕ್ಡೌನ್ ಕೂಡಾ ವಿಫಲವಾಗುತ್ತದೆ. ಅಷ್ಟು ಮಾತ್ರವಲ್ಲದೇ ಪ್ರತಿಯೊಬ್ಬನಿಗೂ ಜೀವಿಸುವ ಹಕ್ಕನ್ನು ನೀಡುವ, ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯೂ ಆಗಲಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.