ಕೊಚ್ಚಿ, ಮೇ 11(Daijiworld News/MSP): ಏರ್ ಇಂಡಿಯಾ ವಿಶೇಷ ವಿಮಾನಗಳಲ್ಲಿ ಗುರುವಾರ ಅಬುದಾಬಿ ಮತ್ತು ದುಬೈ ನಿಂದ ಕೇರಳಕ್ಕೆ ಮರಳಿದ್ದ363 ಭಾರತೀಯರ ಪೈಕಿ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಗುರುವಾರ ಕೇರಳಕ್ಕೆ ಬಂದ ಇಬ್ಬರಿಗೆ ಶನಿವಾರ ಸೋಂಕು ದೃಢಪಟ್ಟಿತ್ತು. ಭಾನುವಾರ ಮತ್ತೆ ಮೂವರು ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಈವರೆಗೆ ಐವರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ.
ಈಗಾಗಲೇ ವೈರಸ್ ಹೊಡೆತಕ್ಕೆ ಸಿಲುಕಿ ನಲುಗಿರುವ ಕೇರಳ ರಾಜ್ಯ ಸರ್ಕಾರದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ನಡುವೆ ವಿವಿಧ ದೇಶಗಳಿಂದ ಮುಂಬೈಗೆ ಬಂದಿರುವ 572 ಭಾರತೀಯರನ್ನು ವಿಮಾನ ನಿಲ್ದಾಣ ಸಮೀಪದ ಹೊಟೇಲ್ ಗಳಲ್ಲಿ ಕ್ವಾರೆಂಟೈನ್ ಇರಿಸಲಾಗಿದೆ.
ದುಬೈ ಮತ್ತು ಅಬುದಾಬಿಯಿಂದ ಹೊರಡುವ ವಲಸಿಗರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿಯೇ ಕಳುಹಿಸಿಕೊಡಲಾಗುತ್ತದೆ ಇದು ತುಂಬಾ ಅಪಾಯಕಾರಿ ಬೆಳವಣಿಗೆ ಎಂದು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ.