ನವದೆಹಲಿ, ಮೇ 11 (Daijiworld News/MB) : ದೇಶದಲ್ಲಿ ಕೊರೊನಾ ಲಾಕ್ಡೌನ್ ನಡುವೆಯೂ ನಾಳೆಯಿಂದ ರೈಲು ಸಂಚಾರ ಆರಂಭಿಸಲು ಭಾರತೀಯ ರೈಲ್ವೆ ಇಲಾಖೆ ತೀರ್ಮಾನಿಸಿದ್ದು ಇಂದಿನಿಂದ ಆನ್ಲೈನ್ ಬುಕ್ಕಿಂಗ್ 4 ಗಂಟೆಯಿಂದಲೇ ಆರಂಭವಾಗಲಿದೆ.
ಆರಂಭದಲ್ಲಿ 15 ಜೋಡಿ ರೈಲುಗಳು ಸಂಚರಿಸಲಿದ್ದು, ಈ ರೈಲುಗಳು ವಿಶೇಷ ರೈಲುಗಳಾಗಿ ಸಂಚರಿಸಲಿವೆ. ಇವುಗಳು ದಿಬ್ರುಘರ್, ಅಗರ್ತಲ, ಹೌರಾ, ಪಾಟ್ನಾ, ಬಿಲಾಸ್ ಪುರ್, ರಾಂಚಿ, ಭುವನೇಶ್ವರ್, ಸಿಖಂದರಾಬಾದ್, ಬೆಂಗಳೂರು, ಚನ್ನೈ, ತಿರುವನಂತಪುರ, ಮಡಗಾವ್, ಸೆಂಟ್ರಲ್ ಮುಂಬೈ, ಅಹಮದಾಬಾದ್ ಮತ್ತು ಜಮ್ಮುವಿನ ನಡುವೆ ಸಂಚಾರ ಮಾಡಲಿದೆ.
ಪ್ರಯಾಣಿಕರು ಆನ್ಲೈನ್ ಮೂಲಕ ಮಾತ್ರ ಟಿಕೆಟ್ ಬುಕ್ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಪ್ರಯಾಣ ಮಾಡಬೇಕು ಎಂದು ಆದೇಶಿಸಲಾಗಿದೆ. ಇನ್ನು, ನಿಲ್ದಾಣದಲ್ಲಿ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಲಾಗುತ್ತದೆ. ಅಲ್ಲಿ ಕೊರೊನಾ ಸೋಂಕು ಗುಣಲಕ್ಷಣಗಳು ಕಂಡು ಬಂದರೆ ಅಂತಹ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅವಕಾಶವಿಲ್ಲ. ರೈಲಿನಿಂದ ಇಳಿದ ಮೇಲೆ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುತ್ತದೆ. ಜತೆಗೆ ಕೇಂದ್ರದ ಆದೇಶದ ಮೇರೆಗೆ ಸಾಮಾಜಿಕ ಅಂತರ ಕಡ್ಡಾಯ ಪಾಲನೇ ಮಾಡಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಮಾರ್ಚ್ 25ರಂದು ಲಾಕ್ಡೌನ್ ಆರಂಭವಾದ ನಂತರ ಪ್ರಯಾಣಿಕರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು.