ಬೆಂಗಳೂರು, ಮೇ 11(Daijiworld News/MSP): ಕಳೆದೆರಡು ದಿನಗಳಿಗೆ ಹೋಲಿಸಿದರೆ ಇಂದು ರಾಜ್ಯದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಇಂದು ಒಟ್ಟಾರೆ 14 ಕೊರೊನಾ ಹೊಸ ಕೇಸ್ ರಾಜ್ಯದಲ್ಲಿ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಗ್ರೀನ್ ಝೋನ್ ನಲ್ಲಿದ್ದ ಹಾಸನದಲ್ಲಿ ಮುಂಬೈಯಿಂದ ಬಂದಿದ್ದ ಮಹಿಳೆಯಲ್ಲಿ ಕೊರೊನಾ ಪತ್ತೆಯಾಗಿದೆ.
ದಾವಣಗರೆಯಲ್ಲಿ ಮೂವರಿಗೆ ಕಲಬುರ್ಗಿಯಲ್ಲಿ ಒಬ್ಬರಿಗೆ, , ಹಾವೇರಿಯಲ್ಲಿ ಒಬ್ಬರಿಗೆ, ಬೆಂಗಳೂರು ನಗರದಲ್ಲಿ ಒಬ್ಬರಿಗೆ, ಹಾಸನದಲ್ಲಿ ಒಬ್ಬರಿಗೆ, ಮಂಡ್ಯದಲ್ಲಿ ಒಬ್ಬರಿಗೆ, ಬೆಂಗಳೂರಿನಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಒಬ್ಬರಿಗೆ, ಬಾಗಲಕೋಟೆಯ ಇಬ್ಬರಿಗೆ, ವಿಜಯಪುರದ ಒಬ್ಬರಿಗೆ ಮತ್ತು ಬೀದರ್ ನ ಇಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ 14 ಜನರಿಗೆ ಕೊರೋನಾ ಸೋಂಕು ತಗುಲಿ, ಕೊರೋನಾ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕಿಲ್ಲರ್ ಕೊರೊನಾಗೆ ಇದುವರೆಗೆ 31 ಜನರು ಸಾವನ್ನಪ್ಪಿದ್ದು, ಸೋಂಕಿತರಾದಂತ 426 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.