ಬೆಂಗಳೂರು, ಮೇ 12 (Daijiworld News/MSP): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇಂದು 42 ಮಂದಿಯಲ್ಲಿ ಕೊರೊನಾ ಸೋಂಕು ರಾಜ್ಯದಲ್ಲಿ ಪತ್ತೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗಿನ ವರದಿ ಪ್ರಕಟ ಮಾಡಿದ್ದು ಒಟ್ಟು ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.
42 ಕೇಸ್ಗಳ ಪೈಕಿ ಬಾಗಲಕೋಟೆ 15, ಧಾರವಾಡ 9 ಹಾಗೂ ಹಾಸನದಲ್ಲಿ 5 ಪ್ರಕರಣ ದಾಖಲಾಗಿದೆ. ಯಾದಗಿರಿ 2, ದಕ್ಷಿಣ ಕನ್ನಡ 2, ಬೀದರ್ 2 ಹಾಗೂ ಬೆಂಗಳೂರು ನಗರ 3 ಕೇಸ್ ಪತ್ತೆಯಾಗಿದೆ. ಇನ್ನು ಬಳ್ಳಾರಿ 1, ಚಿಕ್ಕಬಳ್ಳಾಪುರ 1, ಕಲಬುರಗಿ 1 ಹಾಗೂ ಮಂಡ್ಯದಲ್ಲಿ 1 ಪ್ರಕರಣ ವರದಿಯಾಗಿದೆ.
ಇನ್ನು ಕಿಲ್ಲರ್ ಕೊರೋನಾಗೆ ಇದುವರೆಗೆ ರಾಜ್ಯದಲ್ಲಿ 31 ಜನರು ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ. 904 ಮಂದಿಯ ಪೈಕಿ423 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಗ್ರೀನ್ ಝೋನ್ ನಲ್ಲಿದ್ದ ಹಾಸನದಲ್ಲಿ ಇಂದು 5 ಪ್ರಕರಣಗಳು ವರದಿಯಾಗಿದೆ. ಒಂದೇ ಕುಟುಂಬದ ಈ ಐವರು ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದಾರೆ.