ನವದೆಹಲಿ, ಮೇ 12 (DaijiworldNews/SM): ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಭಾಷಣ ಮಾಡುತ್ತಿದ್ದಾರೆ. ಲಾಕ್ ಡೌನ್ ಬಳಿಕ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದಾರೆ.
ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ ಎಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಅವರ ಸೇವೆ ಅಪೂರ್ವವಾಗಿದೆ ಎಂದಿದ್ದಾರೆ.
ಪ್ರಧಾನಿ ಭಾಷಣದ ಪ್ರಮುಖಾಂಶಗಳು
ದೇಶದಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದೆ
ಇಂತಹ ಸಂಕಟದ ದಿನ ಈ ಹಿಂದೆ ನೋಡಿಲ್ಲ
ಇದು ಅನಿಶ್ಚಿತವಾಗಿ ಉಂಟಾಗಿರುವ ಘಟನೆ
ನಮಗೆ ಬದುಕಬೇಕಾಗಿದೆ, ಮುಂದುವರಿಯಬೇಕಿದೆ
ಜಗತ್ತು ಇಂದು ಕೊರೊನಾದಿಂದ ಸಂಕಷ್ಟದಲ್ಲಿದೆ
42 ಲಕ್ಷ ಜನ ವಿಶ್ವದೆಲ್ಲೆಡೆ ಕೊರೊನಾ ಪೀಡಿತರಾಗಿದ್ದಾರೆ
ಇಡೀ ವಿಶ್ವಕ್ಕೆ ನಾವು ಮಾದರಿಯಾಗಬೇಕಿದೆ
ಹಲವು ಮಂದಿ ತಮ್ಮ ಕುಟುಂಬ, ಸಂಬಂಧಿಗಳನ್ನು ಕಳೆದುಕೊಂಡಿದ್ದಾರೆ
ವಿಶ್ವವನ್ನು ಒಂದು ಪರಿವಾರ ಎಂದು ಭಾರತೀಯರು ನಂಬಿದ್ದಾರೆ
ಸ್ವಾವಲಂಭಿ ಭಾರತ ಬಗ್ಗೆ ನಾವು ಚಿಂತಿಸಬೇಕಾಗಿದೆ
ಭೂಮಿಯನ್ನು ನಾವು ತಾಯಿ ಎಂದು ಗೌರವಿಸುತ್ತೇವೆ
ಸುಖ-ಸಮೃದ್ದ ವಿಶ್ವ ಕಟ್ಟುವುದು ಭಾರತದ ಕನಸು
ಭಾರತದ ಮೇಲೆ ವಿಶ್ವವೇ ಭರವಸೆ ಇಟ್ಟಿದೆ
ಭಾರತ ಪರಿಸ್ಥಿತಿಯನ್ನು ಸುಧಾರಿಸಲಿದೆ
ವಿಶ್ವದ ಆರ್ಥಿಕತೆ ಮೇಲೆ ಕೊರೊನಾ ಸಂಕಟ
20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ
‘ಆತ್ಮ ನಿರ್ಭರ್ ಭಾರತ್ ಅಭಿಯಾನ್’ ಪ್ಯಾಕೇಜ್ ಘೋಷಣೆ
20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಿ
ದೇಶದ ಅಭಿವೃದ್ಧಿಗೆ ಪೂರಕವಾಗಿ ಪ್ಯಾಕೇಜ್ ಘೋಷಣೆ
ಭಾರತದ ಅಭಿವೃದ್ಧಿಗೆ ಹೊಸ ದಿಕ್ಕು ತೋರಲಿದೆ
ದೇಶದ ಶ್ರಮಿಕರಿ, ದೇಶದ ಕೃಷಿಕರಿಗೆ ನೆರವಾಗಲಿದೆ
ಪ್ರಧಾನಿ ಮೋದಿ ಬಳಸಿದ ಪಂಚ ಸೂತ್ರಗಳು:
ಆರ್ಥಿಕತೆ
ಮೂಲ ಸೌಕರ್ಯ
ತಂತ್ರಜ್ಞಾನ
ಜನಸಂಖ್ಯೆ
ಬೇಡಿಕೆ