ನವದೆಹಲಿ, ಮೇ 12 (DaijiworldNews/SM): ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಹೊಸ ಪ್ಯಾಕೇಜ್ ಘೊಷಣೆ ಮಾಡಿದ್ದಾರೆ. ‘ಆತ್ಮ ನಿರ್ಭರ್ ಭಾರತ್ ಅಭಿಯಾನ್’ ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ದೇಶದ ಅಭಿವೃದ್ಧಿಗೆ 20 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜನ್ನು ಪ್ರಧಾನಿ ಘೊಷಣೆ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಭಾರತದ ಅಭಿವೃದ್ಧಿಗೆ ಈ ಪ್ಯಾಕೇಜ್ ಹೊಸ ದಿಕ್ಕು ತೋರಲಿದೆ. ದೇಶದ ಶ್ರಮಿಕರಿ, ದೇಶದ ಕೃಷಿಕರಿಗೆ, ಸಣ್ಣ ಉದ್ಯಮಗಳಿಗೆ ಈ ಪ್ಯಾಕೇಜ್ ನೆರವಾಗಲಿದೆ ಎಂದು ಪ್ರಧಾನಿಗಳು ಘೊಷಣೆ ಮಾಡಿದ್ದಾರೆ.
ಈ ಅನುದಾನ ಯಾರಿಗೆಲ್ಲ ಸಿಗಲಿದೆ, ಯಾವೆಲ್ಲ ಕ್ಷೇತ್ರಕ್ಕೆ ಸಿಗಲಿವೆ ಎಂಬ ಬಗ್ಗೆ ಶಿಘ್ರದಲ್ಲೇ ಅರ್ಥಸಚಿವರು ವಿವರಗಳನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.