ನವದೆಹಲಿ, ಮೇ 12 (DaijiworldNews/SM): ದೇಶದೆಲ್ಲೆಡೆ ಮೇ 18ರಿಂದ ಹೊಸ ಲಾಕ್ ಡೌನ್ ನಿಯಮಗಳನ್ನು ಘೋಷಣೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ನಾಲ್ಕನೇ ಹಂತದ ಲಾಕ್ ಡೌನ್ ಬಗ್ಗೆ ಹೊಸ ನಿಯಮಗಳನ್ನು ರೂಪಿಸಲಾಗುವುದು. ಶಿಘ್ರದಲ್ಲೇ ಹೊಸ ನಿಯಮಗಳನ್ನು ಘೋಷಿಸಲಾಗುವುದು. ಮತ್ತಷ್ಟು ಹೊಸ ತನದೊಂದಿಗೆ ಹೊಸ ನಿಯಮಗಳು ಜಾರಿಗೆ ಬರಲಿದೆ. ನಾಲ್ಕನೇ ಹಂತದ ಲಾಕ್ ಡೌನ್ ಹೊಸ ನಿಯಮಗಳಿಂದ ಕೂಡಿರಲಿದೆ. ಮೇ 17ರೊಳಗೆ ಹೊಸ ನಿಯಮಗಳ ಘೋಷಣೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆದರೆ, ನಾಲ್ಕನೇ ಹಂತದ ಲಾಕ್ ಡೌನ್ ದೇಶದೆಲ್ಲೆಡೆ ಜಾರಿಯಾಗಲಿದೆಯಾ? ಏನೆಲ್ಲ ಹೊಸ ನಿಯಮಗಳಿವೆ ಈ ಬಗ್ಗೆ ಶೀಘ್ರವೇ ಘೋಷಣೆ ಮಾಡಲಾಗುವುದು ಎಂದು ಅವರು ಘೋಷಣೆ ಮಾಡಿದ್ದಾರೆ.