ನವದೆಹಲಿ, ಮೇ 12 (DaijiworldNews/SM): ದೇಶ ಆರ್ಥಿಕ ಸಂಕಶ್ಟದಲ್ಲಿದ್ದು, ಈ ಸಂದರ್ಭ ಕೊರೊನಾ ಮತ್ತಷ್ಟು ಸಂಕಷ್ಟಕ್ಕೀಡಾಗುವಂತೆ ಮಾಡಿದೆ. ಈ ಸಂದರ್ಭದಲ್ಲಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೋರ್ವನಲ್ಲಿದೆ. ಈ ಹಿನ್ನೆಲೆಯಲ್ಲಿ ಲೋಕಲ್ ವಸ್ತುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಲೋಕಲ್ ಸೆ ಗ್ಲೋಬಲ್ ಎನ್ನುವ ಮೂಲಕ ನಮ್ಮ ಸ್ಥಳೀಯ ವಿಚಾರಗಳಿಗೆ ಹೆಚ್ಚಿನ ಆಧ್ಯತೆ ಎಂಬುವುದನ್ನು ತಿಳಿಸಿದ್ದಾರೆ. ಅಲ್ಲದೆ, ಸ್ಥಳೀಯ ವಸ್ತುಗಳನ್ನೇ ನಾವು ಬಳಸಬೇಕು. ಹಾಗೂ ಅವುಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಆ ಮೂಲಕ ಲೋಕಲ್ ನಿಂದ ನಾವು ಗ್ಲೋಬಲ್ ನತ್ತ ಮುಖಮಾಡಬೇಕೆಂದು ಕರೆ ನೀಡಿದ್ದಾರೆ.
ವಿಶ್ವದಲ್ಲಿ ಸ್ಥಳೀಯ ವಿಚಾರಗಳನ್ನು ಬಳಸಿ ವಿಶ್ವವೇ ಗುರುತಿಸುವ ಕಾರ್ಯಗಳನ್ನು ಮಾಡಲಾಗಿದೆ. ಭಾರತವೂ ಕೂಡ ಈ ನಿಯಮಗಳನ್ನು ಅನುಸರಿಸಬೇಕಾಗಿದೆ. ಸ್ಥಳೀಯ ಮಾರುಕಟ್ಟೆಯನ್ನು ಬಲಪಡಿಸಬೇಕಾಗಿದೆ. ಜತೆಗೆ ಸ್ಥಳೀಯರೇ ಆ ಬಗ್ಗೆ ಪ್ರಚಾರ ನೀಡಬೇಕಿದೆ ಎಂದು ಪ್ರಧಾನಿಗಳು ತಿಳಿಸಿದ್ದಾರೆ.