ಮುಂಬೈ, ಮೇ 13 (Daijiworld News/MB) : ಕೊರೊನಾ ನಿಯಂತ್ರಿಸಲು ಸಾಮಾಜಿಕ ಅಂತರವೂ ಕೂಡಾ ಮುಖ್ಯವಾಗಿದ್ದು ಮದ್ಯ ಖರೀದಿಗಾಗಿ ಮದ್ಯದಂಗಡಿಗಳ ಮುಂದೆ ಜನರು ಗುಂಪು ಸೇರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಮನೆ ಬಾಗಿಲಿಗೆ ಮದ್ಯ ಮಾರಾಟ ಮಾಡಲು ಮಂಗಳವಾರ ಆದೇಶಿಸಿದೆ.
ಇದರ ಮಾರ್ಗಸೂಚಿಗಳನ್ನು ಸಿದ್ದ ಮಾಡಿದ ಬಳಿಕವಷ್ಟೇ ಈ ಆದೇಶ ಜಾರಿಗೆ ಬರಲಿದ್ದು ಒಂದೆರಡು ದಿನದಲ್ಲಿ ಮಾರ್ಗಸೂಚಿ ಸಿದ್ದವಾಗಲಿದೆ. ಮದ್ಯದ ಹಣ ಪಾವತಿಯ ವಿಚಾರ ಮಾರಾಟಗಾರ ಮತ್ತು ಗ್ರಾಹಕರೇ ತೀರ್ಮಾನಕೈಗೊಳ್ಳಬೇಕು. ಒಂದು ಬಾರಿಗೆ ಭಾರತೀಯ ತಯಾರಿಕಾ ಮದ್ಯದ 12 ಬಾಟಲ್ಗಳನ್ನು ಖರೀದಿಸಬಹುದಾಗಿದೆ. ಈ ನಿರ್ಧಾರವನ್ನು ಅಂಗಡಿ ಎದುರು ಜನರು ಸೇರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಲಾಕ್ಡೌನ್ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರವಿಲ್ಲದೆ ಸೇರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮನೆ ಬಾಗಲಿಗೇ ಮದ್ಯ ಮಾರಾಟದ ಬಗ್ಗೆ ರಾಜ್ಯ ಸರ್ಕಾರಗಳು ಚಿಂತನೆ ನಡೆಸಬಹುದು ಎಂದು ಹೇಳಿತ್ತು.