ನವದೆಹಲಿ, ಮೇ 13 (DaijiworldNews/PY) : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿಯನ್ನುದೇಶಿಸಿ ಮಾತನಾಡಲಿದ್ದು, ಆರ್ಥಿಕ ಪ್ಯಾಕೇಜ್, ಆತ್ಮನಿರ್ಭಾರ್ ಭಾರತ್ ಅಭಿಯಾನದ ಬಗ್ಗೆ ವಿವರ ನೀಡಲಿದ್ದಾರೆ.
ಕೊರೊನಾ ಲಾಕ್ಡೌನ್ನಿಂದಾಗಿ ಇಂದು ದೇಶದ ಆರ್ಥಿಕ ವ್ಯವಸ್ಥೆಯು ಹದಗೆಟ್ಟಿದ್ದು, ಪ್ರಧಾನಿ ಮೋದಿ ಅವರು ನಿನ್ನೆ 20 ಲಕ್ಷ ಕೋಟಿ ರೂಪಾಯಿಗಳ ಪರಿಹಾರ ಘೋಷಣೆ ಮಾಡಿದ್ದು, ಇದರ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಲಿದ್ದಾರೆ ಎಂದು ತಿಳಿಸಿದ್ದರು.
ಪ್ರಧಾನ ಮಂತ್ರಿ ಮೋದಿ ಅವರು ನಿನ್ನೆ ಘೋಷಣೆ ಮಾಡಿದ್ದ ಮೊತ್ತ ಸುಮಾರು 265 ಬಿಲಿಯನ್ ಡಾಲರ್ ಆಗಿದ್ದು, ಇಡೀ ಏಷ್ಯಾ ಖಂಡದಲ್ಲಿ ಜಪಾನ್ನ ಬಳಿಕ ಇಷ್ಟು ಪರಿಹಾರ ಮೊತ್ತವನ್ನು ಘೋಷಣೆ ಮಾಡಿದೆ ದೇಶ ಭಾರತವಾಗಿದೆ.